ಸುಳ್ಯ: ಆಲೆಟ್ಟಿ ಗ್ರಾಮದ ಗುಂಡ್ಯ ಮಾಡಾರುಮನೆ ಸಪರಿವಾರ ಶ್ರೀ ಉಳ್ಳಾಕುಳು ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ಸಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ದೈವಗಳ ಧರ್ಮ ನಡಾವಳಿ ನೇಮೋತ್ಸವ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಇಂದು ಮತ್ತು ನಾಳೆ(ಫೆ.3 ಮತ್ತು 4) ನಡೆಯಲಿದೆ.
ಫೆ.3 ಶನಿವಾರ ಬೆಳಿಗ್ಗೆ
ಉಗ್ರಾಣ ತುಂಬುವುದು, ತಂತ್ರಿಗಳ ಆಗಮನ, ಗಣಪತಿ ಹವನ, ನವಕ, ನವಕಾಭಿಷೇಕ, ನಾಗತಂಬಿಲ, ಸಪರಿವಾರ ದೈವ ದೇವರುಗಳ ತಂಬಿಲ, ಮಹಾಪೂಜೆ, ಪ್ರಸಾದ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 7 ರಿಂದ ಶ್ರೀ ಉಳ್ಳಾಕುಳು ಸಪರಿವಾರ ದೈವದ ಭಂಡಾರ ಏರಿ ಧರ್ಮನಡಾವಳಿ ನೇಮೋತ್ಸವ, ವಾಲಸರಿ, ಕಿರಿಯರ ನೇಮ, ಹಿರಿಯರ ನೇಮ, ಶ್ರೀ ಮುಡಿ ಗಂಧ ಪ್ರಸಾದ, ಅನ್ನ ಸಂತರ್ಪಣೆ ನಡೆಯಲಿಸೆ.
ಫೆ.4 ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ 9.00ರಿಂದ ಸಪರಿವಾರ ದೈವದ ನೇಮೋತ್ಸವ, ಶ್ರೀ ಮಲೆ ಚಾಮುಂಡಿ ದೈವ, ಶ್ರೀ ಪುರುಷ ದೈವ, ಶ್ರೀ ಮದಿಮಾಳ್, ಶ್ರೀ ಅಜ್ಜಿ ದೈವ, ಶ್ರೀ ಪೊಟ್ಟನ್ ದೈವ, ಶ್ರೀ ಪಂಜುರ್ಲಿ ದೈವ, ಶ್ರೀ ಕೂಜಿಗಳ ನೇಮ ನಡೆದು ಶ್ರೀಮುಡಿ ಗಂಧ ಪ್ರಸಾದ, ಅನ್ನ ಸಂತರ್ಪಣೆ ನಡೆಯಲಿದೆ.









