ಸುಳ್ಯ: ಸುಳ್ಯ ತಾಲೂಕಿನ ಮಡಪ್ಪಾಡಿ ಸಮೀಪದ ಶೀರಡ್ಕ, ಹಾಡಿಕಲ್ಲು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಹಬ್ಬಿರುವ ಬಗ್ಗೆ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಶೀರಡ್ಕ, ಹಾಡಿಕಲ್ಲು ಭಾಗದಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಕಂಡು ಬಂದಿದೆ. ಅರಣ್ಯ ಇಲಾಖೆಯ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಕಾಡ್ಗಿಚ್ಚು ನಂದಿಸುವ ಪ್ರಯತ್ನ ನಡೆಸುತ್ತಾ
ಬಂದಿದ್ದಾರೆ. ಇಂದು ಕೂಡ ಶೀರಡ್ಕ ಭಾಗದಲ್ಲಿ ಕಾಡ್ಹಿಚ್ಚು ಹಬ್ಬಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಏಳುವುದು ಮಡಪ್ಪಾಡಿಗೆ ಕಂಡು ಬಂದಿದೆ. ಅಲ್ಲಿ ಬೆಂಕಿ ಉರಿಯುವುದರಿಂದ ಏಳುವ ಹೊಗೆ ಕಂಡು ಬಂದಿದೆ. ಅಲ್ಲದೆ ಬೆಂಕಿ ಉರಿಯುವ ಭಾರೀ ಶಬ್ದವೂ ಕೇಳಿ ಬರುತಿದೆ ಎನ್ನುತ್ತಾರೆ ಮಡಪ್ಪಾಡಿಯ ಕೃಷಿಕರಾದ ಎಂ.ಡಿ.ವಿಜಯಕುಮಾರ್.

ಕಿಲೋ ಮೀಟರ್ ಗಟ್ಟಲೆ ದೂರಕ್ಕೆ ಹೊಗೆ ಏಳುವುದು ಕಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳಿಂದ ಕಾಡ್ಗಿಚ್ಚು ಕಂಡು ಬಂದಿದ್ದು ಕಾರ್ಯಾಚರಣೆ ನಡೆಸಲಾಗುತಿದೆ. ಇಂದು ಕೂಡ ಶೀರಡ್ಕ ಭಾಗದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು ಅರಣ್ಯ ಇಲಾಖೆ ನಂದಿಸುವ ಕಾರ್ಯ ನಡೆಸಲಾಗುತಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.