ಸುಳ್ಯ:ಸುಳ್ಯ ತಾಲೂಕಿನ ಮಡಪ್ಪಾಡಿ ಸಮೀಪದ ಶೀರಡ್ಕ ಭಾಗದಲ್ಲಿ ಕಾಡ್ಗಿಚ್ಚು ಕಂಡು ಬಂದಿದ್ದು ರಾತ್ರಿಯೂ ಉರಿಯುತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುತ್ತು ಪೋಣಿಸಿದಂತೆ ದೂರದ ಬೆಟ್ಟದಲ್ಲಿ ಬೆಂಕಿ ಹಬ್ಬಿರುವುದು ಕಂಡು ಬಂದಿದ್ದು ಮೊಬೈಲ್ ಕ್ಯಾಮರಾಕ್ಕೆ
ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಶೀರಡ್ಕ, ಹಾಡಿಕಲ್ಲು ಭಾಗದಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಕಂಡು ಬಂದಿದೆ.ಇಂದು ಕೂಡ ಶೀರಡ್ಕ ಭಾಗದಲ್ಲಿ ಕಾಡ್ಹಿಚ್ಚು ವ್ಯಾಪಕವಾಗಿ ಹಬ್ಬಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಕಾಡ್ಗಿಚ್ಚು ನಂದಿಸುವ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಏಳುವುದು ಮಡಪ್ಪಾಡಿಗೆ ಕಂಡು ಬಂದಿದೆ. ರಾತ್ರಿಯ ವೇಳೆಯೂ ಕಾಡ್ಗಿಚ್ಚು ಹಬ್ಬಿರುವುದು ಸುಮಾರು ಎರಡು ಕಿ.ಮಿ.ದೂರದ ಮಡಪ್ಪಾಡಿ ಭಾಗಕ್ಕೆ ಕಂಡು ಬಂದಿದೆ.