ಪಂ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಕಾಚು ಕುಚುಂಬ ದೈವದ ನೂತನ ದೈವಸ್ಥಾನದ ದಾರಂದ ಮುಹೂರ್ತ ಅ.18ರಂದು ನಡೆಯಿತು. ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರು, ದೇಗುಲದ

ಗೌರವ ಸಲಹೆಗಾರರು ಹಾಗೂ ಹಲಸಿನ ಮರದ ಬಾಗಿಲು, ದಾರಂದವನ್ನು ಕೊಡುಗೆಯಾಗಿ ನೀಡಿರುವ ಮಹೇಶ್ ಕುಮಾರ್ ಕರಿಕ್ಕಳ,ಇನ್ನೊರ್ವ ಗೌರವ ಸಲಹೆಗಾರರಾದ ಉಮೇಶ್ ಬುಡೆಂಗಿ ಬಳ್ಪ,ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಮಾಯಿಲಪ್ಪ ಗೌಡ, ಧರ್ಮಣ್ಣ ನಾಯ್ಕ, ಪೈಂದೋಡಿ ಸುಬ್ರಾಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಗೌಡ ಕುದ್ವ, ಶಿಲ್ಪ ಮಹೇಶ್ ಕರಿಕ್ಕಳ, ಪುಷ್ಪಾ ಡಿ ಪ್ರಸಾದ್ ಕಾನತ್ತೂರು ಹಾಗೂ ಭಕ್ತ ದಿಗಳು ಉಪಸ್ಥಿತರಿದ್ದರು.









