ಕಲ್ಲಪಳ್ಳಿ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ. ಎಲ್. ಅಶ್ವಿನಿ ಚುನಾವಣಾ ಪ್ರಚಾರಕ್ಕೆ ಗಡಿ ಪ್ರದೇಶವಾದ ಕಲ್ಲಪಳ್ಳಿಗೆ ಆಗಮಿಸಿದ್ದರು. ಕಲ್ಲಪಳ್ಳಿಯಲ್ಲಿ ಕಾರ್ಯಕರ್ತರನ್ನು ಮುಖಂಡರನ್ನು ಹಾಗೂ
ಮತದಾರರನ್ನು ಭೇಟಿ ಮಾಡಿದರು. ಪೆರುಮುಂಡ ಮತ್ತಿತರ ಕಡೆಗಳಲ್ಲಿ ಮತದಾರರ ಭೇಟಿ ಮಾಡಿದರು.ಹಲವು ಮಂದಿ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಬಳಾಂತೋಡಿನಲ್ಲಿರುವ ಬಿಜೆಪಿ ಪನತ್ತಡಿ ಗ್ರಾಮ ಕಚೇರಿ ಭೇಟಿ ಮಾಡಿದರು. ಕರಿಕೆ ಮಂಞಡುಕ್ಕ ಶ್ರೀ ತುಳೂರು ವನವತ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಿಜೆಪಿ ಮುಖಂಡರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









