ಬೆಂಗಳೂರು: ಸಂಪೂರ್ಣ ಚಂದ್ರಗ್ರಹಣವು ಸೆ.7 ಭಾನುವಾರ ಸಂಭವಿಸಲಿದೆ.ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ಗ್ರಹಣ ಗೋಚರಿಸಲಿದೆ.ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ನಡೆಯುವ
ಈ ನೆರಳಿನ ಆಟವನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.ಭಾನುವಾರ ರಾತ್ರಿ 8.58ಕ್ಕೆ ಆರಂಭಗೊಂಡು 9.57ರ ವೇಳೆಗೆ ಭಾಗಶಃ ಗ್ರಹಣ ಪ್ರಕ್ರಿಯೆ ಗ್ರಹಣ ನಡೆದು 11.01ರಿಂದ 12.23ರ ಅವಧಿಯಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಸೋಮವಾರ ಮುಂಜಾನೆ 2.25ಕ್ಕೆ ಅಂತ್ಯಗೊಳ್ಳುತ್ತದೆ.ಚಂದ್ರಗ್ರಹಣದ ಹಿನ್ನಲೆಯಲ್ಲಿ ವಿವಿಧ ದೇವಾಲಯಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆಯಾಗಲಿದೆ.ಮುಂದಿನ ಸಂಪೂರ್ಣ ಚಂದ್ರಗ್ರಹಣವು 2028ರ ಡಿ.31ರಂದು ನಡೆಯಲಿದೆ’












