ಲಖನೌ: ಕೊನೆಯ ಎಸೆತದವರೆಗೆ ಗೆಲುವಿಗಾಗಿ ಸಂಜು ಸ್ಯಾಮ್ಸನ್ ನಡೆಸಿದ ಹೋರಾಟ ವ್ಯರ್ಥವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ರನ್ ಸೋಲು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ನಿಗದಿತ 40 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 249 ರನ್ ಗಳಿಸಿತು. ಭಾರತ 40 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಈ ಮೂಲಕ 9 ರನ್‌ಗೆ
ಸೋಲೊಪ್ಪಿಕೊಂಡಿತು. 63 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ನೆರವಿನಿಂದ ಅಜೇಯ 86 ರನ್ ಗಳಿಸಿದ ಸಂಜು ಸ್ಯಾಮ್ಸನ್ ಗೆಲುವಿಗಾಗಿ ಹೋರಾಟ ನಡೆಸಿದರು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಸ್ಯಾಮ್ಸನ್ 20 ರನ್ ಸಿಡಿಸಿದರು. ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 50 ರನ್, ಶಾರ್ದೀಲ್ ಠಾಕೂರ್ 31 ಎಸೆತಗಳಲ್ಲಿ 33 ರನ್ ಗಳಿಸಿದರು. 51 ರನ್ ಗಳಿಸುವಷ್ಟರಲ್ಲಿ ಭಾರತ 4 ವಿಕೆಟ್ ಕಳೆದು ಕೊಂಡಿತು. ಅಯ್ಯರ್ ಹಾಗು ಸ್ಯಾಮ್ಸನ್ 5 ನೇ ವಿಕೆಟ್‌ಗೆ 87 ರನ್ ಮತ್ತು ಸ್ಯಾಮ್ಸನ್ ಹಾಗು ಠಾಕೂರ್ 6 ನೇ ವಿಕೆಟ್‌ಗೆ 93 ರನ್ ಜೊತೆಯಾಟ ನೀಡಿದರು.
ಮೂರು ಪಂದ್ಯಗಳ ಸರಣಿಯ ಮೊದಲು ಬ್ಯಾಟಿಂಗ್ ನಡೆಸಿದ ಆಫ್ರಿಕಾ ಪರ ಡೇವಿಡ್ ಮಲಾನ್ (22) ಕ್ವಿಂಟನ್ ಡಿಕಾಕ್ (48) ಹೆನ್ರಿಚ್ ಕ್ಲಾಸನ್ 65 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 74 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ 63 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 75 ರನ್ ಸಿಡಿಸಿದರು.ಭಾರತದ ಪರ ಶಾರ್ದೂಲ್ ಠಾಕೂರ್ 2 ವಿಕೆಟ್ ಕಿತ್ತರು. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.ಮಳೆಯಿಂದಾಗಿ ಪಂದ್ಯವನ್ನು 40 ಓವರ್‌ಗೆ ಇಳಿಸಲಾಗಿತ್ತು.