ಕೋಲ್ಕತ್ತ: ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಲಖನೌ ಸೂಪರ್ ಜೈಂಟ್ಸ್ ತಂಡ 4 ರನ್ಗಳಿಂದ ಮಣಿಸಿತು.
ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ಗಳಿಸಿತು.ಕಠಿಣ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು
234 ರನ್ಗಳಿಸಲು ಶಕ್ತವಾಯಿತು. ಅಜಿಂಕ್ಯ ರಹಾನೆ 61, ವಕಟೇಶ್ ಅಯ್ಯರ್ 45, ರಿಂಕು ಸಿಂಗ್ 38 ರನ್ಗಳಿಸಿ ಹೋರಾಟ ನಡೆಸಿದರೂ ಗೆಲುವಿನ ಸನಿಹ ಎಡವಿದರು. ಲಖನೌ ಪರ ಆಕಾಶ್ ದೀಪ್, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಲಖನೌ ಪರ ಸಿಕ್ಸರ್ ಬೌಂಡರಿಗಳ ಮಳೆ ಸುರಿಸಿದ ನಿಕೊಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಅವರ ಅಬ್ಬರದ ಅರ್ಧ ಶತಕ ಎಲ್ಎಸ್ಜಿಗೆ ಬೃಹತ್ ಮೊತ್ತ ಪೇರಿಸಲು ನೆರವು ನೀಡಿತ್ತು.ನಿಕೊಲಸ್ ಪೂರನ್ 36 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 87 ರನ್ ಹಾಗೂ ಮಿಚೆಲ್ ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 81 ರನ್ಗಳಿಸಿದರು. ಆಡಂ ಮರ್ಕರಂ 28 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು.ಕೋಲ್ಕತ್ತ ಪರ ಹರ್ಷಿತ್ ರಾಣ 2 ವಿಕೆಟ್ ಪಡೆದರು.