ಸುಳ್ಯ: ನಾಳೆ ನಡೆಯುವ ಲೋಕಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.ಮತದಾನ ಸುಸೂತ್ರವಾಗಿ ನಡೆಯಲು ಕ್ಷೇತ್ರದಾದ್ಯಂತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸುಳ್ಯ ಕ್ಷೇತ್ರದಲ್ಲಿ ಚುನಾವಣೆಗೆ ಒಟ್ಟು 233 ಮತಗಟ್ಟೆ ಸಿದ್ಧಪಡಿಸಲಾಗಿದೆ. ನಕ್ಸಲ್ ಪೀಡಿತ, ಸೂಕ್ಷ್ಮ ಸೇರಿದಂತೆ 18 ‘ಕ್ರಿಟಿಕಲ್’ ಬೂತ್ಗಳು ಎಂದು ಗುರುತಿಸಲಾಗಿದೆ. ಎಲ್ಲಾ ಬೂತ್ಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ
ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕ್ರಿಟಿಕಲ್ ಬೂತ್ಗಳಲ್ಲಿ ಹೆಚ್ಚುವರಿ ಭದ್ರತೆ ಮಾಡಲಾಗಿದೆ. ಭದ್ರತೆಗಾಗಿ ಪೊಲೀಸ್ 18 ಸೆಕ್ಟರ್ಗಳಾಗಿ ವಿಂಗಡಿಸಲಾಗಿದೆ. ಒಂದೊಂದು ಸೆಕ್ಟರ್ನ ನೇತೃತ್ವವನ್ನು ಉಪ ನಿರೀಕ್ಷರು ವಹಿಸುವರು. ಒಬ್ಬರು ವೃತ್ತ ನಿರೀಕ್ಷರು 6 ಸೆಕ್ಟರ್ಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.
18 ಸೆಕ್ಟರ್ನ ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ಡಿವೈಎಸ್ಪಿ ನೋಡಿಕೊಳ್ಳುವರು.
ಒಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ 3 ಮಂದಿ ವೃತ್ತ ನಿರೀಕ್ಷಕರು, 13 ಉಪ ನಿರೀಕ್ಷಕರು ಭದ್ರತೆಯ ಉಸ್ತುವಾರಿ ನೋಡಿ ಕೊಳ್ಳಲಿದ್ದಾರೆ. 420 ಪೊಲೀಸ್ ಸಿಬ್ಬಂದಿಗಳು,100 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ, 42 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾಮಾನ್ಯ ಬೂತ್ಗಳಲ್ಲಿ ಒಬ್ವರು ಭದ್ರತಾ ಸಿಬ್ಬಂದಿ ಇರುತ್ತಾರೆ. ಕ್ರಿಟಿಕಲ್ ಬೂತ್ಗಳಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಹಾಗೂ 4 ಮಂದಿ ಆಯುಧಧಾರಿಗಳಾದ ಮೀಸಲು ಪಡೆಯ ಸಿಬ್ಬಂದಿಗಳನ್ನು ನಿಯೋಜಿಸಿ ಬಿಗು ಭದ್ರತೆ ಏರ್ಪಡಿಸಲಾಗಿದೆ.
ಅಲ್ಲದೆ ಮೊಬೈಲ್ ಸ್ಕ್ವಾಡ್ಗಳು ಕ್ಷೇತ್ರದಾದ್ಯಂತ ನಿರಂತರ ಕಣ್ಗಾವಲು ಇರಿಸಿದೆ. ಗಡಿಯಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ಒಟ್ಟಿನಲ್ಲಿ
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಗು ಪೊಲೀಸ್ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.