ನವದೆಹಲಿ: ಅಡುಗೆ ಅನಿಲ ಪೂರೈಕೆ ಕಂಪನಿಗಳು ದರವನ್ನು ಸಿಲಿಂಡರ್ಗೆ ರೂ.50 ಏರಿಕೆ ಮಾಡಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.ಈ ಏರಿಕೆ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ.
ಇದರಿಂದ 14.2 ಕೆ.ಜಿಯ ಎಲ್ಪಿಜಿ ಸಿಲಿಂಡರ್ ಬೆಲೆ 803 ರಿಂದ 853ಕ್ಕೆ ಏರಿಕೆಯಾಗಲಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 503ಕ್ಕೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ದರ ಇನ್ನು 553ಕ್ಕೆ ಏರಿಕೆಯಾಲಿದೆ. ಸ್ಥಳೀಯ ಸಾಗಾಟ ವೆಚ್ಚ ಸೇರಿದಾಗ ದರ ಇನ್ನೂ ಹೆಚ್ಚಲಿದೆ.