ಸುಳ್ಯ: ಗೃಹ ಬಳಕೆ ಮತ್ತು ವಾಣೀಜ್ಯ ಬಳಕೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಏರಿಕೆಯಾಗಿದೆ. ಈ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಗೃಹ ಬಳಕೆಯ 14.2 ಕೆಜಿಯ ಪ್ರತಿ ಸಿಲಿಂಡರ್ ದರ ರೂ.50 ಮತ್ತು ವಾಣೀಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ ರೂ.350 ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಸುಳ್ಯದಲ್ಲಿ ಗೃಹ ಬಳಕೆಯ
ಸಿಲಿಂಡರ್ ದರ 1116 ಕ್ಕೆ ಏರಿಕಯಾಗಲಿದ್ದು ಸಾಗಾಟ ವೆಚ್ಚ ಸೇರಿ ಪ್ರತಿ ಸಿಲಿಂಡರ್ಗೆ ಗ್ರಾಹಕರು ರೂ.1160 ನೀಡಬೇಕಾಗಿದೆ. ವಾಣೀಜ್ಯ ಸಿಲಿಂಡರ್ ಬೆಲೆ 350 ರೂ ಏರಿದ್ದು ಪ್ರತಿ ಸುಳ್ಯದಲ್ಲಿ ಪ್ರತಿ ಸಿಲಿಂಡರ್ಗೆ 2200 ರೂ ನೀಡಬೇಕಾಗಿದೆ ಎಂದು ಡೀಲರ್ಗಳು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ ರೂ 1103 ಕ್ಕೆ ಏರಿಕೆಯಾಗಿದೆ. ಹಾಗೆಯೇ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 350.50 ರೂ. ಏರಿಕೆಯಾಗಿದೆ ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 2119.50 ರೂಗೆ ಏರಿಕೆಯಾಗಿದೆ ಬೆಂಗಳೂರು ರೂ 1,055.ಆಗಲಿದೆ. ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಗೃಹ ಖರ್ಚು ಹೆಚ್ಚಾಗುವುದರ ಜೊತೆಗೆ ಹೋಟೆಲ್ ಆಹಾರವೂ ದುಬಾರಿಯಾಗಲಿದೆ.