ಸುಬ್ರಹ್ಮಣ್ಯ: ಲೋಕಸಭೆಯ ಭಾಷಾಂತರಕಾರರಾಗಿ ಡಾ. ಗೋವಿಂದ ಎನ್.ಎಸ್ ಆಯ್ಕೆಯಾಗಿದ್ದಾರೆ. ಇವರು ಲೋಕಸಭೆಯ ಕಲಾಪದಲ್ಲಿ ನಡೆಯುವ ಚರ್ಚೆಗಳನ್ನು ಇಂಗ್ಲೀಷ್ ಹಾಗೂ ಕನ್ನಡ ಭಾಷೆಗೆ ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕನ್ನಡ ಭಾಷೆಗೆ ಭಾಷಾಂತರಕಾರರಾಗಿ 15 ಮಂದಿ ಅರ್ಜಿ
ಸಲ್ಲಿಸಿದ್ದು 10 ಮಂದಿಯ ಆಯ್ಕೆ ನಡೆದಿದ್ದು ಅದರಲ್ಲಿ ನಾಲ್ವರ ನೇಮಕವಾಗಿದೆ.ಅದರಲ್ಲಿ ಗೋವಿಂದ ಎನ್ ಎಸ್ ದ.ಕ ಜಿಲ್ಲೆಯ ಏಕೈಕ ವ್ಯಕ್ತಿ. ಸಂಸತ್ ಕಲಾಪದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದ್ದನ್ನು ಇಂಗ್ಲೀಷ್ ಭಾಷೆಗೆ, ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದನ್ನು ಕನ್ನಡಕ್ಕೆ ಭಾಷೆಗೆ ಭಾಷಾಂತರ ಮಾಡುವುದು ಇವರ ಕೆಲಸ. ಕಲಾಪ ಸಂದರ್ಭದಲ್ಲಿ ಮಾತ್ರ ಇವರು ಕಾರ್ಯನಿರ್ವಹಿಸಲಿದ್ದಾರೆ. ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾಗಿ ನಿವೃತ್ತರಾಗಿರುವ ಇವರು ಪ್ರಾಂಶುಪಾಲರಾಗಿಯು ಕೆಲಸ ಮಾಡಿದ್ದರು.