ಸುಳ್ಯ: ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ವತಿಯಿಂದ ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜಾ ಹೇಳಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯ ಹಳೆಗೇಟಿನ ಜೋನ್ ವಿಲಿಯಂ ಲಸ್ರಾದೋ ಅವರ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿ.ಕೈಂಡ್.. ಬಿ ಸ್ಮೈಲ್ ಎಂಬ ಕಾರ್ಯಕ್ರಮದಡಿ
ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಹಲವು ಸಹಾಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ. ಯುವಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಉತ್ತಮ ಅವಕಾಶವನ್ನು ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ ಎಂದು ಅವರು ಹೇಳಿದರು.ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಕ್ರಿಯಾಶೀಲವಾಗಿದೆ ಎಂದರು.

ನಿರಂತರ ಸೇವಾ ಕಾರ್ಯ:ವೀರಪ್ಪ ಗೌಡ
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಮಾತನಾಡಿ ಸುಳ್ಯ ಲಯನ್ಸ್ ಕ್ಲಬ್ 50 ವರ್ಷಾವನ್ನು ಪೂರೈಸಿ 51ನೇ ವರ್ಷಾದಲ್ಲಿ ಮುನ್ನಡೆಯುತ್ತಿದ್ದು ಅನೇಕ ಸಮಾಜಮುಖಿ ಸೇವೆಗಳಿಂದ ಸುಳ್ಯ ಜನತೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು. 2023-2024ನೇ ಸಾಲಿನಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅನೇಕ ಸೇವಾ ಚಟುವಟುಕೆಗಳನ್ನು ಕೈಗೊಂಡಿದ್ದು ಮುಖ್ಯವಾಗಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ ಬೈಲ್ನ್ನು ಅಭಿವೃದಿಗಾಗಿ ದತ್ತ ಪಡೆದು. ಖಾಲಿ ಇದ್ದ ಶಾಲೆಯ ಜಾಗದಲ್ಲಿ 1 ಎಕ್ರೆ ಸ್ಥಳದಲ್ಲಿ 325 ಅಡಿಕೆ ಗಿಡ. 20 ತೆಂಗಿನ ಗಿಡ ಹಾಗೂ 25 ಹಣ್ಣಿನ ಗಿಡಗಳನ್ನು ನೆಟ್ಟು 4 ವರ್ಷಾ ಪೋಷಿಸಿ ಬಳಿಕ ಶಾಲಾ ಆಡಳಿತಕ್ಕೆ ಬಿಟ್ಟು ಕೊಡುವ ಮಹತ್ವದ ಯೋಜನೆ ಹಮ್ಮಿಕೊಂಡಿದೆ.ಇವತ್ತು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ ಅವರ ಅಧಿಕೃತ ಭೇಟಿ ಸಂದಂರ್ಭದಲ್ಲಿ ತೋಟವನ್ನು ವೀಕ್ಷಣೆ ಮಾಡಿ ಗಿಡ ನೆಡುವುದರ ಮೂಲಕ ಬೆಂಬಲವನ್ನು ಸೂಚಿಸಿರುತ್ತಾರೆ. ಹಾಗೆ ಕೊಡಿಯಲ್ಬೈಲು ಶಾಲಾ ಕಟ್ಟಡ ದುರಸ್ಥಿ ಅವಶ್ಯಕತೆ ಇದ್ದು ಇಲಾಖೆ ಅನುದಾನವನ್ನು ಹೊಂದಿಸಿಕೊಂಡು ದುರಸ್ಥಿ ಕಾರ್ಯವನ್ನು ಮಾಡಲಾಗಿದೆ. ಜಟ್ಟಿಪಳ್ಳ ವಾರ್ಡಿನಲ್ಲಿ ಎಲ್ಲಾ ರಸ್ತೆಗಳಿಗೆ 23 ಕಡೆಗಳಲ್ಲಿ ಮಾರ್ಗಸೂಚಿ ಫಲಕವನ್ನು ಇವತ್ತು ಲಯನ್ಸ್ ಕ್ಲಬ್ ನಿಂದ ಅಳವಡಿಸಲಾಗಿದೆ.
ಮಹತ್ಮಾಗಾಂಧಿ ಆಂಗ್ಲ ಮಾಧ್ಯಮ ಶಾಲೆ ಕೊಡಿಯಾಲ್ ಬೈಲು ಇಲ್ಲಿಗೆ ಒಂದು ಕೊಠಡಿ ಟೈಲ್ಸ್ ಅಳವಡಿಸಲು ರೂ. 50,000/-ನಿಡಲಾಗುತ್ತಿದೆ. ಹಾಗೆಯೇ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಇಲ್ಲಿಗೆ ಶಾಲೆಯ ಪ್ರವೇಶ ದ್ವಾರವನ್ನು ರೂ. 60,000/-ವೆಚ್ಚದಲ್ಲಿ ನಿರ್ಮಿಸಿದು. ಜಿಲ್ಲಾ ಗವರ್ನಾರ್ ರವರು ಉದ್ಘಾಟಿಸಿರುತ್ತಾರೆ. ಹಾಗೆಯೇ ಸುಳ್ಯ ಸಾಂದೀಪ ವಿಶೇಷ ಚೇತನ ಮಕ್ಕಳ ಶಾಲೆಗೆ ಅವರ ಪೋಷಣೆ ವೆಚ್ಚಕ್ಕಾಗಿ ಧನಸಹಾಯ, ಸರಕಾರಿ ಪ್ರೌಢ ಶಾಲೆ ಅಜ್ಜಾವರ ಇಲ್ಲಿನ ಮಕ್ಕಳಿಗೆ ಬಿಸಿ ಊಟಕ್ಕಾಗಿ ಊಟದ ಬಟ್ಟಲು ನೀಡಲಾಗಿದೆ.
ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ, ಹಾಗೂ ಕಣ್ಣಿನ ಚಿಕಿತ್ಸೆ ಮತ್ತು ತಪಾಸಣೆ ಕ್ಯಾಂಪ್ ರಕ್ತದಾನಕ್ಯಾಪ್ಗಳನ್ನು ನಡೆಸಿರುತ್ತೆವೆ.ಸರಕಾರದ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸೌಲಭ್ಯವನ್ನು ಜನರಿಗೆ ಮುಟ್ಟಿಸುವ ನೆಲೆಯಲ್ಲಿ ಇಲಾಖೆಯ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.ಬೆಳ್ಳಾರೆ ಕೆ.ಎ.ಎಸ್ ಶಾಲೆಗೆ ಬೆಂಚು-ಡೆಸ್ಕ್ಗಳನ್ನು ನೀಡಲಾಗಿದೆ.ಅವಶ್ಯಕತೆ ಇದ್ದವರ ವೈದ್ಯಕೀಯ ವೆಚ್ಚಕ್ಕೆ, ವಿದ್ಯಾಭ್ಯಾಸ ವೆಚ್ಚಕ್ಕಾಗಿ ಧನಸಹಾಯ ಮಾಡಲಾಗಿದೆ ಹೀಗೆ ಹಲವು ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಕಾರ್ಯದರ್ಶಿ ರೋಸ್ವಾಲ್ ಡಿಸೋಜ, ಖಜಾಂಜಿ ಸುಧಾಕರ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ರೇಣುಕಾ ಸದಾನಂದ ಜಾಕೆ, ವಲಯ ಅಧ್ಯಕ್ಷ ಸಂತೋಷ್ ಜಾಕೆ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಖಜಾಂಜಿ ಕಿರಣ್ ನೀರ್ಪಾಡಿ ಇದ್ದರು.









