ಸುಳ್ಯ:ಸುಳ್ಯ ಲಯನ್ಸ್ ಕ್ಲಬ್ಗೆ ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಮಾ.26ರಂದು ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ದುಗ್ಗಲಡ್ಕ ಸಮೀಪ ಗೋಂಟಡ್ಕದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯೋರ್ವರಿಗೆ ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ 2.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ನೀಡಿದ ಮನೆಯನ್ನು

ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿಯವರು ಹಸ್ತಾಂತರ ಮಾಡಿದರು.ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೆಯರ್ಮೆನ್ ವಸಂತಕುಮಾರ್ ಶೆಟ್ಟಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಅನಿಲ್ಕುಮಾರ್, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಶ್ರೀ ಜೆ ರೈ, ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ಡಾ.ಲಕ್ಷ್ಮೀಶ,
ಪ್ರಮುಖರಾದ ಜಯರಾಮ ದೇರಪ್ಪಜ್ಜನಮನೆ, ಎನ್.ಜಯಪ್ರಕಾಶ್ ರೈ, ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ರೈ, ಆನಂದ ಪೂಜಾರಿ, ಜಯಂತ ರೈ, ದೊಡ್ಡಣ್ಣ ಬರೆಮೇಲು, ಪ್ರೊ.ಬಾಲಚಂದ್ರ ಗೌಡ, ಗಿರೀಶ್.ಡಿ.ಎಸ್, ಎಸ್.ಆರ್.ಸೂರಯ್ಯ, ಕರುಂಬಯ್ಯ, ನಳಿನ್ ಕುಮಾರ್ ಕೋಡ್ತುಗುಳಿ, ಹರೀಶ್ ಉಬರಡ್ಕ, ರೀಟಾ ಕರುಂಬಯ್ಯ, ನಳಿನಿ ಸೂರಯ್ಯ, ಪಿ.ಎಂ.ರಂಗನಾಥ್, ಪದ್ಮಾರಂಗನಾಥ್, ನೇತ್ರಾವತಿ ಪಡ್ಡಂಬೈಲು, ವೀರಪ್ಪ ಗೌಡ ಕಣ್ಕಲ್, ಡಿ.ಟಿ.ದಯಾನಂದ ಮತ್ತಿತರರು ಉಪಸ್ಥಿತರಿದ್ದರು.