ಪಂಬೆತ್ತಾಡಿ: ಪಂಜ ಲಯನ್ಸ್ ಕ್ಲಬ್ ವತಿಯಿಂದ ಪಂಬೆತ್ತಾಡಿ ಸ.ಕಿ.ಪ್ರಾ ಶಾಲೆಯ 1ರಿಂದ7ನೇ ತರಗತಿಯ ಎಲ್ಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ ಮಾಡಲಾಯಿತು. ಸಭಾಧ್ಯಕ್ಷತೆಯನ್ನು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವಹಿಸಿದ್ದರು.ನಿಕಟ ಪೂರ್ವ ಅಧ್ಯಕ್ಷ

ಪುರುಷೋತ್ತಮ ದಂಬೆಕೋಡಿ, ಶಾಲಾ ಎಸ್ ಡಿ. ಎಂ. ಸಿ. ಅಧ್ಯಕ್ಷ ಸತ್ಯಶಂಕರ್ ಕಲ್ಚಾರು, ಲಯನ್ಸ್ ವಲಯ ಅಧ್ಯಕ್ಷ ಸಂತೋಷ್ ಜಾಕೆ, ಶಾಲೆಯ ಮುಖ್ಯ ಶಿಕ್ಷಕಿ ಮಂಗಳಾ, ಹಾಗು ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಮೇಲ್ಪಡಿ, ಖಜಾಂಜಿ ಆನಂದ ಗೌಡ, ಬಾಲಕೃಷ್ಣ ಗೌಡ ಮೂಲೆಮನೆ ಉಪಸಿತರಿದ್ದರು. ಪೋಷಕರು, ಎಸ್ಡಿಎಂಸಿ ಸದಸ್ಯರು ಲಯನ್ಸ್ ಕ್ಲಬ್ನ ಪೂರ್ವ ಅಧ್ಯಕ್ಷರುಗಳು ಸದಸ್ಯರು ಮತ್ತು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಭಾರ್ಗವಿ ಸ್ವಾಗತಿಸಿ, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ವಂದಿಸಿದರು.