ಸುಳ್ಯ:ಸುಳ್ಯ ಲಯನ್ಸ್ ಕ್ಲಬ್ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.16ರಂದು ನಡೆಯಿತು. ಅಧ್ಯಕ್ಷ ರಾಮಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಲ್ಲತಡ್ಕ, ಕೋಶಾಧಿಕಾರಿ ರಮೇಶ್ ಶೆಟ್ಟಿ ಹಾಗೂ ತಂಡ ಅಧಿಕಾರ ವಹಿಸಿದರು. ಲಯನ್ಸ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಹಾಗೂ ತಂಡ ಅಧಿಕಾರ ಹಸ್ತಾಂತರ ಮಾಡಿದರು.ಲಯನ್ಸ್ ಜಿಲ್ಲಾ
ದ್ವಿತೀಯ ಉಪ ರಾಜ್ಯಪಾಲ ಹೆಚ್.ಎಂ. ತಾರನಾಥ್ ಪದಪ್ರದಾನ ನೆರವೇರಿಸಿದರು. ಚಾರ್ಟರ್ ನೈಟ್ ಕಾರ್ಯಕ್ರಮ ವನ್ನು ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಉದ್ಘಾಟಿಸಿದರು. ಲಯನ್ಸ್ ಐಪಿಪಿ ರೂಪಾಶ್ರೀ ಜೆ ರೈ ವೇದಿಕೆಯಲ್ಲಿ ಇದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನ ಸಹಾಯ ವಿತರಿಸಲಾಯಿತು.
ಕೊಡಿಯಾಲಬೈಲು ಸರಕಾರಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ನಿರ್ಮಿಸಿದ ಅಡಿಕೆ ತೋಟ, ಹಣ್ಣಿನ ತೋಟ ನಿರ್ಮಾಣಕ್ಕೆ ಸಹಕರಿಸಿದ ಕೊಡಿಯಾಲಬೈಲು ಶಾಲಾ ಮುಖ್ಯ ಶಿಕ್ಷಕಿ ಸವಿತಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಚಂದ್ರಕಲಾ ಕೆ. ಅವರನ್ನು ಸನ್ಮಾನಿಸಲಾಯಿತು.ನಿರ್ಗಮನ ಅಧ್ಯಕ್ಷ ವೀರಪ್ಪ ಗೌಡ, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ,ಲಯನ್ಸ್ ಜಿಲ್ಲಾ ದ್ವೀತಿಯ ಉಪ ರಾಜ್ಯಪಾಲರನ್ನು ಹಾಗೂ ಲಯನ್ಸ್ ಕ್ಲಬ್ ಟ್ರಸ್ಟ್ ಕಾರ್ಯದರ್ಶಿ ದೇವಿಪ್ರಸಾದ್ ಕುದ್ಪಾಜೆ ಅವರನ್ನು ಗೌರವಿಸಲಾಯಿತು.ನೂತನ ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ ವಂದಿಸಿದರು. ವೀಣಾ ಪ್ರಸಾದ್ – ತೇಜಸ್ವಿನಿ ಕಿರಣ್ ನೀರ್ಪಾಡಿ ಕಾರ್ಯಕ್ರಮ ನಿರೂಪಿಸಿದರು.