ಹೈದರಾಬಾದ್:ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಹೈದರಾಬಾದ್ ಗೆ ಭೇಟಿ ನೀಡಿದ್ದಾರೆ.ಗೋಟ್ ಇಂಡಿಯಾ ಟೂರ್ನ ಅಂಗವಾಗಿ ಹೈದರಾಬಾದ್ಗೆ ಆಗಮಿಸಿದ್ದ ಲಿಯೋನಲ್ ಮೆಸ್ಸಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಂಡದ ಜೊತೆ ಫುಟ್ಬಾಲ್ ಆಡಿದ್ದಾರೆ.
ಬಳಿಕ

ಇಡೀ ಸ್ಟೇಡಿಯಂ ಒಂದು ಸುತ್ತು ಹಾಕಿದ ಮೆಸ್ಸಿ ಅಭಿಮಾನಿಗಳತ್ತ ಚೆಂಡನ್ನ ಕಿಕ್ ಮಾಡಿದ್ರು. ಫುಟ್ಬಾಲ್ ದಿಗ್ಗಜ ಆಟಗಾರನನ್ನ ಹತ್ತಿರದಿಂದ ಕಣ್ತುಂಬಿಕೊಂಡ ಹೈದರಾಬಾದ್ ಮಂದಿ ಫುಲ್ ಖುಷ್ ಆಗಿದ್ದಾರೆ.ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭೇಟಿಯಾದರು.
ಕೊಲ್ಕತ್ತಾ ಭೇಟಿ ಬಳಿಕ ಲಿಯೋನಲ್ ಮೆಸ್ಸಿ ಅವರು ಸಂಜೆ ಸಂಜೆ 4:30ರ ಸುಮಾರಿಗೆ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದು ನೇರವಾಗಿ ತಾಜ್ ಫಲಕ್ನುಮಾ ಪ್ಯಾಲೆಸ್ ತಲುಪಿದ್ರು. ಅಲ್ಲಿ, ಮೆಸ್ಸಿ ಅವರನ್ನ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸ್ವಾಗತಿಸಿದರು. ನಂತರ, ಮೆಸ್ಸಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹೈದರಾಬಾದ್ ಭೇಟಿಗೂ ಮೊದಲು ಕೋಲ್ಕತ್ತಾ ಭೇಟಿ ಮಾಡಿದ್ದರು.













