ಕೋಲ್ಕತ್ತ: ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ತಂಡ 239 ರನ್ಗಳ ಗೆಲುವಿನ ಗುರಿ ನೀಡಿದೆ ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ಗಳಿಸಿತು. ಸಿಕ್ಸರ್ ಬೌಂಡರಿಗಳ
ಮಳೆ ಸುರಿಸಿದ ನಿಕೊಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಅವರ ಅಬ್ಬರದ ಅರ್ಧ ಶತಕ ಎಲ್ಎಸ್ಜಿಗೆ ಬೃಹತ್ ಮೊತ್ತ ಪೇರಿಸಲು ನೆರವು ನೀಡಿತ್ತು.ನಿಕೊಲಸ್ ಪೂರನ್ 36 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 87 ರನ್ ಹಾಗೂ ಮಿಚೆಲ್ ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 81 ರನ್ಗಳಿಸುವ ಮೂಲಕ ಲಖನೌ ಸೂಪರ್ ಜೈಂಟ್ಸ್ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. ಆಡಂ ಮರ್ಕರಂ 28 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು.ಕೋಲ್ಕತ್ತ ಪರ ರಾಣ 2 ವಿಕೆಟ್ ಪಡೆದರು.





