ಸುಳ್ಯ: ಎಲ್ಎಲ್.ಬಿ ನಂತರದ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸರ್ವಜ್ಞ ಅಕಾಡೆಮಿ ಮಂಗಳೂರು ಇಲ್ಲಿಯ ನಿರ್ದೇಶಕರಾದ ಸುರೇಶ್ ಎಂ. ಎಸ್ ಭಾಗವಹಿಸಿ
ಮಾತನಾಡಿ ಕಾನೂನು ಪದವಿ ನಂತರದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಉದಯಕೃಷ್ಣ. ಬಿ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಉಪನ್ಯಾಸಕ ಜಯರಾಮ್.ವೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಮತ್ತು ಕವನ ಪ್ರಾರ್ಥಿಸಿದರು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಲನ್. ಬಿ.ಕೆ ಸ್ವಾಗತಿಸಿ, ಲತಾಕುಮಾರಿ ಕೆ.ಡಿ ವಂದಿಸಿದರು. ನಿಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.