ಸುಳ್ಯ: ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ 2023-24ನೇ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ವಹಿಸಿದ್ದರು. ಎಂ.ಬಿ ಫೌಂಡೇಶನ್ನ ಅಧ್ಯಕ್ಷ ಎಂ.ಬಿ ಸದಾಶಿವ ಉದ್ಘಾಟನೆ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ
ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಭಾಗವಹಿಸಿದ್ದರು ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಉಪನ್ಯಾಸಕಿ ಟೀನಾ. ಹೆಚ್.ಎಸ್ ಮತ್ತು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಟೀನಾ.ಹೆಚ್. ಎಸ್ ಪ್ರಮಾಣವಚನ ಬೋಧಿಸಿದರು.
ವಿದ್ಯಾರ್ಥಿನಿ ಶುೃತಿ ರಾಧಾಕೃಷ್ಣನ್ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಪ್ರೊ. ಉದಯಕೃಷ್ಣ. ಬಿ, ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಸಚಿನ್ ಹೆಚ್.ಆರ್ ವಂದಿಸಿದರು. ಉಪನ್ಯಾಸಕಿ ಉಷಾ ಸಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.












