ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರಾ ಪ್ರಯುಕ್ತ ದೇವರ ಪಟ್ಟಣ ಸವಾರಿ ಜ.8ರಂದು ರಾತ್ರಿ ನಡೆಯಿತು. ಪಟ್ಟಣ ಸವಾರಿ ಪ್ರಯುಕ್ತ ಹಳೆಗೇಟು ಹೊಸಗದ್ದೆ ವಸಂತ ಕಟ್ಟೆಯಲ್ಲಿ ವಿಶೇಶ ಪೂಜೆ ನೆರವೇರಿತು. ಭಜನಾ ಕಾರ್ಯಕ್ರಮ ನಡೆಯಿತು.ವಿವಿಧ ಕಡೆಗಳಲ್ಲಿ
ಕಟ್ಟೆಪೂಜೆ ನಡೆಯಿತು.ವಿವೇಕಾನಂದ ವೃತ್ತ, ಹಳೆಗೇಟು ಕಟ್ಟೆ, ಅಮೃತ ಭವನ, ರಾಮ ಮಂದಿರ, ಜಟ್ಟಿಪಳ್ಳ ಕಟ್ಟೆಯಲ್ಲಿ ಪೂಜೆ ನೆರವೇರಿತು. ಪಟ್ಟಣ ಸವಾರಿ ಪ್ರಯುಕ್ತ ವಿವಿಧ ಕಡೆಗಳಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕಡೆಗಳಲ್ಲಿ ನೂರಾರು ಮಂದಿ ಭಕ್ತರು ಸೇರಿದ್ದರು.