ಸುಳ್ಯ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು, ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಪುತ್ತೂರು ತಾಲೂಕು ಕಾಣಿಯೂರು ಗ್ರಾಮದ ನಾಣಿಲ ಹಿರಿಯ ಪ್ರಾಥಮಿಕ ಶಾಲೆಗೆ ಲ್ಯಾಪ್ಟಾಪ್ನ್ನು ಕೊಡುಗೆಯಾಗಿ
ನೀಡಿದರು. ಶಾಲೆಯ ಪರವಾಗಿ ಸುಳ್ಯದ ನ್ಯಾಯವಾದಿ ವೆಂಕಪ್ಪಗೌಡರು ಲ್ಯಾಪ್ಟಾಪ್ ಪಡೆದುಕೊಂಡು ಶಾಲೆಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಊರುಬೈಲು ಉಪಸ್ಥಿತರಿದ್ದರು. ನಾಣಿಲ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಪ್ಪಗೌಡರು ಲ್ಯಾಪ್ಟಾಪ್ನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.









