ಕೊಲಂಬೊ:ಶ್ರೀಲಂಕಾ ತಂಡ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್ಗಳಿಂದ ಮಣಿಸಿತು.ಮೊದಲು ಬ್ಯಾಟ್ ಮಾಡಿದ ಆತಿಥೆಯ ತಂಡ 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 257 ರನ್ ಗಳಿಸಿತು. ಸಮರವಿಕ್ರಮ (93; 72ಎ, 4X8, 6X2) ಹಾಗೂ ಮೆಂಡಿಸ್ (50; 73ಎ; 4X6, 6X1) ಉತ್ತಮ
ಬ್ಯಾಟಿಂಗ್ ಮಾಡಿದರು.ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 48.1 ಓವರ್ಗಳಲ್ಲಿ 236 ರನ್ಗಳಿಗೆ ಆಲೌಟಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ತೌಹೀದ್ ಹೃದಯ್ (82 ರನ್; 97 ಎ.) ಹೊರತುಪಡಿಸಿ ಇತರರು ವಿಫಲರಾದರು. ತಲಾ ಮೂರು ವಿಕೆಟ್ ಪಡೆದ ಮಹೀಶ್ ತೀಕ್ಷಣ, ದಸುನ್ ಶನಕ ಮತ್ತು ಮತೀಶ ಪಥಿರಾಣ ಅವರು ಬಾಂಗ್ಲಾ ಬ್ಯಾಟಿಂಗ್ನ ಬೆನ್ನೆಲುಬು ಮುರಿದರು.