ಸುಳ್ಯ: ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶದ ಸಹಕಾರ ಸಂಘ ಲ್ಯಾಂಪ್ಸ್ ಸೊಸೈಟಿ ಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತ ಪಡೆದಿದ್ದಾರೆ. 4 ಸ್ಥಾನಗಳಿಗೆ ಮಾ.1ರಂದು ನಡೆದ ಚುನಾವಣೆಯಲ್ಲಿ
ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಹಾಗೂ
2 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗಲುವು ಸಾಧಿಸಿದ್ದರು. 3 ಮಂದಿ ಕಾಂಗ್ರೆಸ್ ಬೆಂಬಲಿತರು ಹಾಗೂ 2 ಮಂದಿ ಬಿಜೆಪಿ ಬೆಂಬಲಿತರು ಸೇರಿ 5 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಒಟ್ಟು 9 ಸ್ಥಾನಗಳಲ್ಲಿ ಒಟ್ಟು 5 ಸ್ಥಾನವನ್ನು ಗೆದ್ದುಕೊಂಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ನಡೆಸಲಿದ್ದಾರೆ.