ಸುಳ್ಯ: ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ನಿಯಮಿತ (ಲ್ಯಾಂಪ್ಸ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೀಲಮ್ಮ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಂಡರೀಕ ಕಾಪುಮಲೆ ಅವರಿಗೆ ಬಿಜೆಪಿ ಮುಖಂಡರು ಹಾಗೂ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ
ವಿಜೇತರಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅವರನ್ನುಅಭಿನಂದಿಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ,
ಪರಿಶಿಷ್ಟ ವರ್ಗಗಳ ಸಹಕಾರಿ ಮಹಾಮಂಡಲದ ನಿರ್ದೇಶಕರಾದ ಮಂಜುನಾಥ್, ಪ್ರಮುಖರಾದ ದಾಮೋದರ ಮಂಚಿ, ರಾಮಚಂದ್ರ ಕೆಂಬಾರೆ, ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ್ ಮಾತನಾಡಿ ಅಭಿನಂದಿಸಿದರು.

ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಬಿಜೆಪಿ ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಶ್ರೀಪತಿ ಭಟ್, ಪಿ.ಕೆ.ಉಮೇಶ್ ನಿರ್ದೇಶಕರಾದ ಐತ್ತಪ್ಪ ನಾಯ್ಕ್, ಮಿಥುನ್, ಜಸ್ಮಿತಾ, ಹರ್ಷಿತ್ ಡಿ, ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷೆ ನೀಲಮ್ಮ ಹಾಗೂ ಉಪಾಧ್ಯಕ್ಷ ಪುಂಡರೀಕ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.