ಧರ್ಮಸ್ಥಳ: ಲಕ್ಷ ದೀಪ ಸಂಭ್ರಮಸಲ್ಲಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಆಕರ್ಷಕ ಅಲಂಕಾರಗಳಿಂದ ಕಂಗೊಳಿಸುತಿದೆ.ಬೆಂಗಳೂರಿನ ರಾಮು ಮತ್ತು ರಮೇಶ ಅವರ ತಂಡದ ಹೂವಿನ ವ್ಯಾಪಾರಿಗಳು ವಿವಿಧ ಜಾತಿಯ ಹೂವುಗಳನ್ನು ತಂದು ದೇವಸ್ಥಾನವನ್ನು
ಆಕರ್ಷಕವಾಗಿ ಅಲಂಕರಿಸಿದ್ದಾರೆ.ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಭಕ್ತಾದಿಗಳು ಸುಮಾರು 23 ತಂಡದವರು ಸೇರಿ ಬುಧವಾರ ರಾತ್ರಿ ಎಲ್ಲಾ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದರು.ಮುದ್ದೆ-ಕಾಳುಸಾರು, ಪಲಾವ್, ಬಿಸಿಬೇಳೆಬಾತ್, ರೈಸ್ಬಾತ್, ಹೋಳಿಗೆ, ಮೈಸೂರುಪಾಕ್ ಹಾಗೂ ಮೊದಲಾದವುಗಳೊಂದಿಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಿದರು.ಕಂಚಿಮಾರುಕಟ್ಟೆ ಉತ್ಸವ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭ ಮಂಗಳವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ ನಡೆಯಿತು.ಸಾವಿರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಉತ್ಸವ ವೀಕ್ಷಿಸಿ ಧನ್ಯತೆಯನ್ನು ಪಡೆದರು.













