ಧರ್ಮಸ್ಥಳ:ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಸಂಪನ್ನಗೊಂಡಿತು.ಲಕ್ಷ ದೀಪೋತ್ಸವ ಅಂಗವಾಗಿ ಗುರುವಾರ ನಸುಕಿನಲ್ಲಿ ನಡೆದ ರಥೋತ್ಸವವನ್ನು ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡ ಲಕ್ಷಗಟ್ಟಲೆ ಭಕ್ತರು ಕಣ್ತುಂಬಿಕೊಂಡರು. ಮಂಜುನಾಥನ ಲಕ್ಷ ದೀಪೋತ್ಸವ ವೈಭವವನ್ನು ನೋಡಲು ಭಕ್ತರು ಹರಿದು

ಬಂದರು.ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ
ಲಕ್ಷ ದೀಪೋತ್ಸವ ನಡೆಯಿತು.
ಗೌರಿ ಮಾರುಕಟ್ಟೆ ಉತ್ಸವದೊಂದಿಗೆ ಲಕ್ಷ ದೀಪೋತ್ಸವ ಸಂಪನ್ನಗೊಂಡಿತು.ಲಕ್ಷ ದೀಪೋತ್ಸವ ಪ್ರಯುಕ್ತ ದೇವಸ್ಥಾನ, ಬೀದಿಗಳನ್ನು ಹೂವುಗಳು, ವಿದ್ಯುದ್ದೀಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.






