ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಸ್ಥಾಪಕಾಧ್ಯಕ್ಷ ಹಾಗು ಶಿಕ್ಷಣ ಬ್ರಹ್ಮ ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಹುಟ್ಟು ಹಬ್ಬದ ಪ್ರಯುಕ್ತ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಹಾಗೂ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಕುರುಂಜಿಭಾಗ್ನ ಕೆವಿಜಿ ಸರ್ಕಲ್ನಲ್ಲಿರುವ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಗೆ ಹಾರಾರ್ಪಣೆ ಮಾಡಿ ನುಡಿನಮನ ಸಲ್ಲಿಸಲಾಯಿತು. ಅಕಾಡೆಮಿ ಆಫ್
ಲಿಬರಲ್ ಎಜ್ಯುಕೇಷನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾರ್ಯದರ್ಶಿಗಳಾದ ಕೆ.ವಿ.ಹೇಮನಾಥ, ಡಾ.ಐಶ್ವರ್ಯ, ಕೋಶಾಧಿಕಾರಿ ಗೌತಂ ಗೌಡ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ್, ಪದ್ಮಶ್ರೀ ಪುತಸ್ಕೃತ ಡಾ.ಗಿರೀಶ್ ಭಾರದ್ವಾಜ್, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಹಶೀಲ್ದಾರ್ ಎಂ.ಮಂಜುಳಾ, ನೀಲಾಂಬಿಕೈ ನಟರಾಜನ್, ನ.ಪಂ.
ಮುಖ್ಯಾಧಿಕಾರಿ ಸುಧಾಕರ ಎಚ್.ಎಂ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್,ಡಾ.ಶೀಲಾ ಜಿ ನಾಯಕ್, ಕೆವಿಜಿ ಸುಳ್ಯ ಹಬ್ಬ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಪ್ರಮುಖರಾದ ಎನ್.ಜಯಪ್ರಕಾಶ್ ರೈ, ಕೃಷ್ಣ ಕಾಮತ್, ರಾಮಚಂದ್ರ ಪಿ, ಪ್ರೊ.ಎಂ.ಬಾಲಚಂದ್ರ ಗೌಡ, ಎಂ.ವೆಂಕಪ್ಪ ಗೌಡ, ಚಂದ್ರಶೇಖರ ಪೇರಾಲು, ಕೆ.ಎಂ.ಮುಸ್ತಫ, ಪ್ರಭಾಕಕರನ್ ನಾಯರ್, ಪಿ.ಬಿ.ಸುಧಾಕರ ರೈ, ಕೆ.ಗೋಕುಲ್ದಾಸ್, ಜಗದೀಶ ಅಡ್ತಲೆ, ಎ.ಸಿ.ವಸಂತ, ವಿನಯಕುಮಾರ್ ಕಂದಡ್ಕ, ಪಿ.ಕೆ.ಉಮೇಶ್, ಕೆ.ರಾಜು ಪಂಡಿತ್, ಗಿರೀಶ್ ನಾರ್ಕೋಡು, ದೊಡ್ಡಣ್ಣ ಬರೆಮೇಲು, ಹರಿರಾಯ ಕಾಮತ್, ಮೂಸಾಕುಂಞಿ ಪೈಂಬೆಚ್ಚಾಲು, ಧನಂಜಯ ಮಧುವೆಗದ್ದೆ ಕೆ.ಎಂ.ಮುಸ್ತಫ, ವೀರಪ್ಪ ಗೌಡ ಕಣ್ಕಲ್, ಪ್ರೊ.ದಾಮೋದರ ಗೌಡ, ಅವಿನ್ ಆರ್.ಸಿ, ಶೀಲಾ ಅರುಣ ಕುರುಂಜಿ, ಪ್ರೀತಂ ಡಿ.ಕೆ, ಜನಾರ್ಧನ ನಾಯ್ಕ್, ಹರೀಶ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮಿಥಾಲಿ ರೈ ಸ್ವಾಗತಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.