ಸುಳ್ಯ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 91 ವಿದ್ಯಾರ್ಥಿಗಳು ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ

ವಂಶಿ,ಹಿಮಾನಿ,ಜನನಿ, ಸಾನ್ವಿ, ತನ್ವಿ,ಜ್ಞಾನವಿ
ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳು ಎಲ್ಲರೂ ಉತ್ತೀರ್ಣರಾಗಿದ್ದಾರೆ
ವಾಣಿಜ್ಯ ವಿಭಾಗದಲ್ಲಿ ವಂಶಿ.ಪಿ.ಎಂ 594 ತಾಲೂಕಿಗೆ ಪ್ರಥಮ, ಹಿಮಾನಿ.ಬಿ 593 ತಾಲೂಕಿಗೆ ದ್ವಿತೀಯ ಹಾಗೂ ಹಾಗೂ ಜನನಿ.ಕೆ 590 ಅಂಕ ಗಳೊಂದಿಗೆ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಾನ್ವಿ.ಪಿ.ಎನ್ 584, ತನ್ವಿ.ಜೆ ನಾಯಕ್ 574 ಹಾಗೂ ಜಾಹ್ನವಿ.ಪಿ.ಜೆ 573 ಅಂಕ ಗಳಿಸಿದ್ದು, ಒಟ್ಟು 30 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.











