ಸುಳ್ಯ:ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಡಾ. ಎನ್.ಎ. ಜ್ಞಾನೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರಾಜು ಪಂಡಿತ್, ಖಜಾಂಚಿಯಾಗಿ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ಆಯ್ಕೆಯಾದರು. ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆದ
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾತಿಗಳ ಆಯ್ಕೆ ನಡೆಯಿತು.ಉಪಾಧ್ಯಕ್ಷರಾಗಿ
ಮಾಧವ ಗೌಡ ಮಡಪ್ಪಾಡಿ, ಎ.ಸಿ.ವಸಂತ, ಪ್ರಭಾಕರನ್ ನಾಯರ್, ಚಂದ್ರಾಕ್ಷಿ ಜೆ.ರೈ.. ಹಾಗೂ ಆನಂದ ಖಂಡಿಗ, ಕಾರ್ಯದರ್ಶಿಗಳಾಗಿ ಡಾ. ಹರ್ಷವರ್ಧನ್, ಶಾಫಿ ಕುತ್ತಮೊಟ್ಟೆ, ಗಿರೀಶ್ ನಾರ್ಕೋಡು, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಮುರಳೀಧರ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಡಾ.ಎನ್.ಎ.ಜ್ಞಾನೇಶ್, ರಾಜು ಪಂಡಿತ್, ಎಂ.ಎನ್.ಶ್ರೀಕೃಷ್ಣ ಸೋಮಯಾಗಿ
ಕೆ.ಟಿ.ವಿಶ್ವನಾಥ, ಹರೀಶ್ ಬಂಟ್ವಾಳ್, ಚಂದ್ರಾವತಿ ಬಡ್ಡಡ್ಕ, ಪ್ರದೀಪ್ ಕುಮಾರ್ ಕೆ.ಎಲ್., ಚಂದ್ರಶೇಖರ ನಂಜೆ, ಜಯಂತ ರೈ ಗೋಂಟಡ್ಕ, ಪಿ.ಎಸ್. ಗಂಗಾಧರ್, ಬೆಳ್ಯಪ್ಪ ಗೌಡ ಬಳ್ಳಡ್ಕ, ರುದ್ರಕುಮಾರ್ ಎಂ.ಎಂ., ಬಾಲಕೃಷ್ಣ ಭಟ್ ಕೊಡೆಂಕಿರಿ, ಗಣೇಶ್ ಭಟ್ ಸಿ.ಎ. ಮತ್ತು ಫವಾಜ್ ಕನಕಮಜಲು ಆಯ್ಕೆಯಾದರು.
ಮಹಾ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉಪಸ್ಥಿತರಿದ್ದರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೆಶ್ ಅಂಬೆಕಲ್ಲು ವರದಿ ವಾಚಿಸಿದರು. ಖಜಾಂಚಿ ಜನಾರ್ದನ ನಾಯ್ಕ್ ಲೆಕ್ಕಪತ್ರ ಮಂಡಿಸಿದರು.