ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ಪ್ರಯುಕ್ತ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಡಾ.ಕೆವಿಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಕೃಷಿ ಕಾರ್ಯದಲ್ಲಿ ಅಪಘಾತಗೊಂಡು ದೈಹಿಕ ಶಕ್ತಿ ಕಳೆದುಕೊಂಡ ಇಬ್ಬರು ಯುವಕರಿಗೆ ತಲಾ 25 ಸಾವಿರ ಸಹಾಯ ಧನ
ವಿತರಣೆ ಮಾಡಲಾಯಿತು.ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ. ಚಿದಾನಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ತಹಶೀಲ್ದಾರ್ ಮಂಜುಳ ಎಂ. ಅವರು ಸಹಾಯಧನ ಹಸ್ತಾಂತರ ಮಾಡಿದರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮುಖ್ಯ ಅತಿಥಿಯಾಗಿದ್ದರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ
ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಜು ಪಂಡಿತ್, ಕೋಶಾಧಿಕಾರಿ ಎಂ.ಎನ್.ಶ್ರೀಕೃಷ್ಣ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸದಸ್ಯರಾದ ಕೆ.ಆರ್.ಗಂಗಾಧರ, ಡಾ.ಲೀಲಾಧರ ಡಿ.ವಿ, ಎಂ.ಮೀನಾಕ್ಷಿ ಗೌಡ, ಹೇಮನಾಥ ಕೆ.ವಿ, ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು,ಶೀಲಾ ಅರುಣ ಕುರುಂಜಿ, ಕೆ.ಎಂ.ಮುಸ್ತಫಾ, ಪ್ರಭಾಕರನ್ ನಾಯರ್, ಕೆ.ಟಿ.ವಿಶ್ವನಾಥ, ದಿನೇಶ್ ಅಂಬೆಕಲ್ಲು,ವಿನಯಕುಮಾರ್ ಕಂದಡ್ಕ,ಆನಂದ ಖಂಡಿಗ, ಅವಿನ್ ರಂಗತ್ತಮಲೆ, ಸುಧಾಕರ ಎಂ.ಎಚ್, ಎ.ಸಿ.ವಸಂತ, ಕಮಲಾಕ್ಷಿ ಟೀಚರ್, ಪ್ರಭಾಕರನ್ ನಾಯರ್ ಸಿ.ಎಚ್, ಎಸ್.ಸಂಶುದ್ದೀನ್, ಜನಾರ್ಧನ ನಾಯ್ಕ್, ಜಗದೀಶ್ ಅಡ್ತಲೆ, ವೀರಪ್ಪ ಗೌಡ ಕಣ್ಕಲ್, ದೊಡ್ಡಣ್ಣ ಬರೆಮೇಲು, ಲತಾಶ್ರೀ ಸುಪ್ರೀತ್ ಮೋಂಟಡ್ಕ, ರಾಮಚಂದ್ರ ಬುಡ್ಲೆಗುತ್ತು, ವಿನುತಾ ಪಾತಿಕಲ್ಲು, ಮಾಧವ ಗೌಡ ದೇವಸ್ಯ, ಪಿ.ಕೆ.ಉಮೇಶ್, ಶರತ್ ಅಡ್ಕಾರ್ ಮತ್ತಿತರರು ಉಪಸ್ಥಿತರಿದ್ದರು.