ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸುಳ್ಯ ವತಿಯಿಂದ ಡಾ.ಕುರುಂಜಿ ವೆಂಕಟ್ರಮಣ ಗೌಡರ 95ನೇ ಹುಟ್ಟು ಹಬ್ಬದ ಸವಿನೆನಪಿಗಾಗಿ ಸಮಾಜ ಸೇವಾ ಕಾರ್ಯದಡಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಸರೊಜಾ ಆರ್ ಚೆಂಡೆಮೂಲೆ ಜಯನಗರ ಇವರ ಮನೆಯನ್ನು ಪೂರ್ತಿಗೊಳಿಸಲು
ರೂ. 50,000 ಸಹಾಯ ಧನ ನೀಡಲಾಯಿತು. ಕೆವಿಜಿ ಸುಳ್ಯ ಹಬ್ಬ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆವಿಜಿ ಸುಳ್ಯ ಹಬ್ಬದ ಸ್ಠಾಪಕಾಧ್ಯಕ್ಷ ಎನ್. ಜಯಪ್ರಕಾಶ್ ರೈ ಇವರು ಹಸ್ತಾಂತರ ಮಾಡಿ ಶೀಘ್ರವಾಗಿ ಮನೆಯನ್ನು ಪೂರ್ತಿಗೊಳಿಸಲು ತಿಳಿಸಿದರು. ಸಭೆಯ ಅಧ್ಯಕ್ಢತೆಯನ್ನು ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಕೊಡೆಂಕೇರಿ , ಪತ್ರಕರ್ತ ಹರೀಶ್ ಬಂಟ್ವಾಳ್, ಸಮಾಜ ಸೇವಾ ಸಂಘದ ಪೂರ್ವಾಧ್ಯಕ್ಷ ದೊಡ್ಡಣ್ಣ ಬರೆಮೆಲು, ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಕೊಶಾಧಿಕಾರಿ ಜನಾರ್ದನ ನಾಯ್ಕ್, ಆನಂದ ಖಂಡಿಗ, ಚಂದ್ರಾಕ್ಷಿ ರೈ, ಸಿ.ಎಚ್. ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ಸಮಾಜ ಸೇವಾ ವಿಭಾಗದ ಸಂಚಾಲಕರಾದ
ಡಾ.ಜ್ನಾನೇಶ್ ಎನ್. ಎ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.