ಸುಳ್ಯ:ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 95ನೇ ಹುಟ್ಟು ಹಬ್ಬದ ಸವಿನೆನಪಿಗಾಗಿ ಶಾಲಾ ಕಾಲೇಜುಗಳಲ್ಲಿ ವಿನೂತನ ಕಾರ್ಯಕ್ರಮ ಕೆ.ವಿ.ಜಿ. ಸಾಧನೆ – ಸಂಸ್ಮರಣೆ ಹಾಗೂ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಹಾಗೂ ಭಾಷಣ ಸ್ಪರ್ಧೆಯು ಡಿ.16ರಂದು ನಡೆಯಿತು. ತಾಲೂಕಿನಲ್ಲಿ 26 ಶಾಲೆಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆದ
ಸಮಾರಂಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಹಾಗೂ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿದರು.
ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೇರಾಲು ಮಾತನಾಡಿದರು. ಡಾ. ಜ್ಞಾನೇಶ್ ಎನ್.ಎ. ಸಂಪನ್ಮೂಲ ವ್ಯಕ್ತಿಯಾಗಿ ಡಾ.ಕೆವಿಜಿ ಸಂಸ್ಮರಣೆ ಮಾಡಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಕೋಶಾಧಿಕಾರಿ ಜನಾರ್ಧನ ನಾಯ್ಕ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

ಎನ್ಎಂಸಿಯಲ್ಲಿ ನಡೆದ ಕಾರ್ಯಕ್ರಮ
ಸ್ನೇಹ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಕೆವಿಜಿ ಸಂಸ್ಮರಣಾ ಭಾಷಣ ಮಾಡಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನಿರ್ದೇಶಕ ಪ್ರಭಾಕರನ್ ನಾಯರ್ ಸಿ.ಎಚ್.ಉಪಸ್ಥಿತರಿದ್ದರು
26 ಕಡೆಗಳಲ್ಲಿ ಕಾರ್ಯಕ್ರಮ;
ಡಿ.16ರಂದು ಕೆ.ವಿ.ಜಿ. ಸಾಧನೆ – ಸಂಸ್ಮರಣೆಯ ಕುರಿತು 26 ಮಂದಿ ಸಂಪನ್ಮೂಲ ವ್ಯಕ್ತಿಗಳಿಂದ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಯಿತು.
ಸುಳ್ಯ ಎನ್ನೆಂಸಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಜ್ಞಾನೇಶ್ ಎನ್.ಎ., ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೊ. ಬಾಲಚಂದ್ರ ಗೌಡ ಎಂ, ಪೆರುವಾಜೆ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಪೂವಪ್ಪ ಕಣಿಯೂರು, ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಡಾ.ಪ್ರಭಾಕರ ಶಿಶಿಲ, ಸರಕಾರಿ ಪ್ರೌಢಶಾಲೆ ಎಣ್ಮೂರಿನಲ್ಲಿ ಪ್ರದೀಪ್ ಕುಮಾರ್ ಪನ್ನೆ, ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ಲೋಕನಾಥ ಅಮೆಚೂರು, ಆರ್.ಎಂ.ಎಸ್.ಎ. ಪ್ರೌಢಶಾಲೆ ಸಂಪಾಜೆಯಲ್ಲಿ ಚಿದಾನಂದ ಯು.ಎಸ್., ಎನ್ನೆಂಪಿಯುಸಿ ಅರಂತೋಡಿನಲ್ಲಿ ಕೆ.ಆರ್. ಗಂಗಾಧರ್, ಸರಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ಕಿಶೋರ್ ಕುಮಾರ್ ಕಿರ್ಲಾಯ, ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಮಧುರಾ ಎಂ.ಆರ್., ಶಾರದ ಪ.ಪೂ. ಕಾಲೇಜು ಸುಳ್ಯದಲ್ಲಿ ಸ್ವರ್ಣಕಲಾ, ಸರಕಾರಿ ಪ್ರೌಢಶಾಲೆ ಆಲೆಟ್ಟಿಯಲ್ಲಿ ಜ್ಯೋತ್ಸ್ನಾ ದಿನೇಶ್, ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರಿನಲ್ಲಿ ರೇಷ್ಮಾ ದೇವರಗುಂಡ,

ಸ್ನೇಹ ಶಾಲೆಯಲ್ಲಿ ನಡೆದ ಕಾರ್ಯಕ್ರಮ
ಸರಕಾರಿ ಪ್ರೌಢಶಾಲೆ ಐವರ್ನಾಡಿನಲ್ಲಿ ರಾಮಚಂದ್ರ ಪಿ, ವಿನಯ ಕುಮಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಪುರುಷೋತ್ತಮ ಕಿರ್ಲಾಯ, ಸರಕಾರಿ ಪ್ರೌಢಶಾಲೆ ದುಗಲಡ್ಕದಲ್ಲಿ ದಿನೇಶ್ ಮಡಪ್ಪಾಡಿ, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೊಡ್ಡಣ್ಣ ಬರೆಮೇಲು, ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ಕೆ.ಆರ್. ಗೋಪಾಲಕೃಷ್ಣ, ಸರಕಾರಿ ಪ.ಪೂ. ಕಾಲೇಜು ಗುತ್ತಿಗಾರಿನಲ್ಲಿ ವೆಂಕಪ್ಪ ಗೌಡ ಕೇನಾಜೆ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಡಾ.ಸನತ್ ಕುಮಾರ್ ಡಿ.ಜಿ., ಸ್ನೇಹ ಪ್ರೌಢಶಾಲೆ ಸುಳ್ಯದಲ್ಲಿ ಪ್ರಸನ್ನ ನಿಡ್ಯಮಲೆ, ಗ್ರೀನ್ ವ್ಯೂ ಪ್ರೌಢಶಾಲೆ ಜಟ್ಟಿಪಳ್ಳದಲ್ಲಿ ಅಬ್ದುಲ್ಲ ಅರಂತೋಡು. ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ಡಾ.ಅನುರಾಧ ಕುರುಂಜಿ, ರೋಟರಿ ಪ್ರೌಢಶಾಲೆ ಸುಳ್ಯದಲ್ಲಿ ಪ್ರೊ. ಸಂಜೀವ ಕುದ್ಪಾಜೆ, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಬೀರಮಂಗಲ ಇಲ್ಲಿ ಹರೀಶ್ ಬಂಟ್ವಾಳ್, ವಿವೇಕಾನಂದ ಪ್ರೌಢಶಾಲೆ ವಿನೋಬನಗರದಲ್ಲಿ ಬೇಬಿ ವಿದ್ಯಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.












