ಸುಳ್ಯ:ಭಾರತ ಸರ್ಕಾರದ ನಿರ್ದೇಶನದಂತೆ ರಾಷ್ಟ್ರದಾದ್ಯಂತ ಸೆ. 17ರಿಂದ ಅ. 2 ರ ತನಕ ನಡೆಯುವ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮವು ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆರಂಭಗೊಂಡಿತು.ಕಾಲೇಜಿನ

ಪ್ರಾಂಶುಪಾಲ ಶ್ರೀಧರ ಎಂ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಚ್ಛತೆಯ ಪ್ರಮಾಣವಚನ ಬೋಧಿಸಿದರು.ಇನ್ನೋರ್ವ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್. ಪಿ , ಎನ್ಎಸ್ಎಸ್ ಘಟಕದ ನಾಯಕರಾದ ಪ್ರಣಮ್ ವೈ, ದೀಕ್ಷಿತಾ ಕೆ ಸಿ, ಅಪೂರ್ವ ಹಾಗೂ ಹಾಗೂ ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಪ್ರಮಾಣವಚನ ಸ್ವೀಕಾರದ ನಂತರ ಸ್ವಯಂಸೇವಕರು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದರು.





