ಸುಳ್ಯ: ಸಂಸ್ಥೆಯ ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರುಗಳ ಪ್ರತಿಭೆಯನ್ನು ಗುರುತಿಸಲು ಸೂಕ್ತ ವೇದಿಕೆಯಾಗಬೇಕು ಎಂದು ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಹೇಳಿದರು. ಅವರು ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್ ನ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ
ಉಪಸ್ಥಿತರಿದ್ದ ಕೆವಿಜಿ ಡೆಂಟಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಮಾತನಾಡಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗಾವಕಾಶಗಳಿವೆ. ಕೇಂದ್ರ ಸರ್ಕಾರದ ಮುದ್ರ ಯೋಜನೆಯಂತಹ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವ ಜನರು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಂ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ಷಿಕ ವರದಿ ಮಂಡಿಸಿದರು.
ಸಮಾರಂಭದ ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ವಿದ್ಯಾರ್ಥಿ ಕ್ಷೆಮಾಧಿಕಾರಿ ರಂಗಸ್ವಾಮಿ ಮತ್ತು ಪ್ರಜ್ಞಾ ಕೆ. ಆರ್, ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿದ ರಜತನಿಧಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮುಖ್ಯ ಅತಿಥಿ ಡಾ. ಮೋಕ್ಷಾ ನಾಯಕ್ ಹಾಗೂ ಕಾಲೇಜಿನಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಾಗಳನ್ನು ಸಹೋದ್ಯೋಗಿಗಳನ್ನು ಜೊತೆಗೂಡಿಸಿಕೊಂಡು ಮಾಡುತ್ತಾ ಬರುತ್ತಿರುವ ಮೋನಪ್ಪ ಗೌಡ ಕಾಟೂರು ಇವರುಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಧನುಷ್ ಸ್ವಾಗತಿಸಿ ಚೇತನ್ ವಂದಿಸಿದರು. ಉಪನ್ಯಾಸಕರುಗಳಾದ ಪ್ರಭುಲಿಂಗ ಡಿ.ಹೆಚ್, ಅಣ್ಣಪ್ಪ ಜಿ.ಕೆ ಹಾಗೂ ಸುನಿಲ್ ಕುಮಾರ್ ಎನ್.ಪಿ ವಿವಿದ ಜವಾಬ್ಧಾರಿಗಳನ್ನು ನಿರ್ವಹಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ನಿರೂಪಿಸಿದರು.