ಸುಳ್ಯ: ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ಸ ಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮಟ್ಟದ “ಸೈನ್ಟಿಫಿಕ್ ರೈಟಿಂಗ್, ರಿಸರ್ಚ್ ಇಂಟೆಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್”ನ ಸ್ನಾತಕೋತ್ತರ ಪದವಿ ಮಾರ್ಗದರ್ಶಕರ ಕಾರ್ಯಾಗಾರ ಜೂ.10ರಂದು ಉದ್ಘಾಟನೆಗೊಂಡಿತು.ಜೂ.10ರಿಂದ 12ರ ತನಕ ಕಾಲೇಜಿನ
ಆಡಿಟೋರಿಯಂನಲ್ಲಿ ನಡೆಯುತ್ತಿದೆ. ಉದ್ಘಾಟನೆಯನ್ನು ನೆರವೇರಿಸಿ ಮಾತನ್ನಾಡಿದಡಿದ ಶ್ರೀ. ಶ್ರೀ ಕಾಲೇಜು ಆಫ್ ಆಯುರ್ವೇದಿಕ್ ಸೈನ್ಸ್ ಮತ್ತು ರಿಸರ್ಚ್ ಬೆಂಗಳೂರುಇದರ ಪಂಚ ಕರ್ಮ
ವಿಭಾಗದ ಮುಖ್ಯಸ್ಥರು ಹಾಗೂ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು ಇದರ ಬೋರ್ಡ್ ಆಫ್ ಸ್ಟಡೀಸ್ ಆಯುರ್ವೇದ ವಿಭಾಗದ ಚೆಯರ್ಮೆನ್ ಡಾ. ಗಣೇಶ್ ಪುತ್ತೂರು ಇವರು ರಿಸರ್ಚ್ ಪೇಪರ್ಗಳ ಪ್ರಾಮುಖ್ಯತೆ , ಅಂತರಾಷ್ಟ್ರೀಯ ಮಟ್ಟದ ಲೇಖನ ಬರೆಯಲು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲು ಇಂತಹ ಕಾರ್ಯಗಾರಗಳು ಉಪಯುಕ್ತ ಹಾಗೂ ಬಹಳ ಪ್ರಯೋಜನಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ಮಾತನಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ನೀಡುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಗಾರ ನಡೆಸಲು ಮಾಡಿಕೊಡುತ್ತದೆ. ಮುಂದಿನ ದಿನಗಳಲ್ಲಿ ಅಲೋಪತಿ ವೈದ್ಯ ಪದ್ಧತಿಯವರಿಗೆ ಆಯುರ್ವೇದ ವೈದ್ಯ ಪದ್ಧತಿಯ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದ್ದೇವೆ ಎಂದು ಹೇಳಿದರು. ಈ ಕಾರ್ಯಗಾರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಸೈನ್ಸ್ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಅಕಾಡೆಮಿ ಆಫ್ ಲಿಬರಲ್
ಎಜುಕೇಶನ್ನ ಕಾರ್ಯದರ್ಶಿ ಹಾಗೂ ರಾಜೀವ್ ಗಾಂಧಿ ಯುನಿವರ್ಸಿಟಿ
ಆಫ್ ಹೆಲ್ತ್ ಸೈನ್ಸ್ಸ ಇದರ ಸೆನೆಟ್ ಸದಸ್ಯರಾದ ಡಾ.ಐಶ್ವರ್ಯ ಕೆ.ಸಿ. ಭಾಗವಹಿಸಿ ಇಂತಹ ಕಾರ್ಯಗಾರಗಳು ನಮ್ಮ ವಿಚಾರಗಳನ್ನು ಹೆಚ್ಚು ಹೆಚ್ಚು ತಿಳಿಯಲು ಅನುಕೂಲ ಮಾಡಿಕೊಡುತ್ತದೆ, ಬೇರೆ ಬೇರೆ ಸ್ಥಳಗಳಿಂದ ಬಂದಂತಹ ನಾವು ನಮ್ಮೊಳಗೆ ವಿಚಾರಗಳನ್ನು ವಿನಿಮಯಮಾಡಿಕೊಂಡಾಗ ನಮ್ಮ ವಿಷಯಜ್ಞಾನ ವೃದ್ಧಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಕಾರ್ಯಗಾರದ ಸಂಘಟನಾ ಕಾರ್ಯದರ್ಶಿ ಡಾ.ಕವಿತಾ ಬಿ.ಯಂ.ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಇಂದಿನ ಕಾರ್ಯಗಾರದ ತರಭೇತುದಾರರಾದ ಡಾ. ಪ್ರತೀಭಾ ಸಿ.ಕೆ., ಡಾ.ಆಶಾ ಎಸ್.ಎ., ಡಾ. ನಳೀನಾ ಸರಸ್ವತಿ, ದೇಶದ ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ನಾತಕೋತ್ತರ ಪದವಿ ಮಾರ್ಗದರ್ಶಕರು, ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಡಾ. ಕವಿತಾ ಬಿ. ಯಂ. ವಂದಿಸಿದರು.
ಡಾ. ಹರ್ಷಿತಾ ಎಂ. ಮತ್ತು ಡಾ. ನಿಲೋಫರ್ ತಹನಿ ಆರ್. ಎ., ಕಾರ್ಯಕ್ರಮ ನಿರೂಪಿಸಿದರು.ಡಾಕ್ಟರ್ ಗೌರಿ ಪಾರ್ವತಿ ಮತ್ತು ಡಾಕ್ಟರ್ ಸೂರ್ಯಪ್ರಿಯ ಪ್ರಾರ್ಥಿಸಿದರು.