ಸುಳ್ಯ:ಆರ್ಜಿಯುಎಚ್ಎಸ್ ಅಂತರ್ ವಲಯ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ,ಸಿಂಗಲ್ ಝೋನ್ ಮಹಿಳಾ ಹಗ್ಗಜಗ್ಗಾಟ ಹಾಗೂ ಆರ್ಜಿಯುಎಚ್ಎಸ್ ಸೆಲೆಕ್ಷನ್ ಟ್ರಯಲ್ ಕೆವಿಜಿ ಕ್ಯಾಂಪಸ್ನ ಕ್ರೀಡಾಡಾಂಗಣದಲ್ಲಿ ನಡೆಯಿತು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ ಸಹಯೋಗದಲ್ಲಿ ಸುಳ್ಯ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ

ಆಸ್ಪತ್ರೆಯ ಆಶ್ರಯದಲ್ಲಿ ಪಂದ್ಯಾಟ ನಡೆಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರದಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ. ಸಿ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯೆ, ಮಂಗಳೂರು ಡಾ. ಎಂ.ವಿ. ಶೆಟ್ಟಿ ಫಿಸಿಯೋಥೆರಪಿ ಕಾಲೇಜಿನ ಉಪಪ್ರಾಂಶುಪಾಲೆ ಡಾ. ವೈಶಾಲಿ ಶ್ರೀಜಿತ್ ಉಪಸ್ಥಿತರಿದ್ದರು.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಹಾಗೂ ಕ್ರೀಡಾ ಸಂಯೋಜಕರಾದ ಡಾ. ದಾಮೋದರ್ ಡಿ, ಸಹ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ ಪ್ರಮೋದ್ ಕೆ. ಜೆ, ಚಂದ್ರಾವತಿ, ಡಾ ಸಚಿನ್ ರಿಜಿಸ್ಟ್ರಾರ್ ಡಾ ಸಂದೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಲಯದ ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳಿಂದ ಆಗಮಿಸಿದ ವಿವಿಧ ತಂಡಗಳು ಭಾಗವಹಿಸಿದ್ದವು. ವೈದ್ಯಕೀಯ ಶಿಕ್ಷಣ ನಿರ್ದೇಶಕರುಗಳಾದ ಮಿಥನ್, ನಾಗರಾಜ್ ನಾಯಕ್, ಲೆಫ್ಟಿನೆಂಟ್ ಸೀತಾರಾಮ್ ಎಮ್ ಕಾರ್ಯಕ್ರಮ ನಿರ್ವಹಿಸಿದರು.

















