ಸುಳ್ಯ:ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ನ.21ರಂದು ನಡೆಯಿತು. ಧ್ವಜಾರೋಹಣ ನೆರವೇರಿಸಿ ಕನ್ನಡ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ವಹಿಸಿದ್ದರು. ಕನ್ನಡವೇ ನಿಜವಾದ ಸಂಪರ್ಕ ಸೇತು, ನಮ್ಮ ಭಾಷೆ ನಮ್ಮ ಹೆಮ್ಮೆ, ಕನ್ನಡವನ್ನು
ಉಳಿಸಿ ಬೆಳೆಸಬೇಕು ಎಂದರು.ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಭಾಗವಹಿಸಿ ಮಾತನಾಡಿ ಕನ್ನಡದ ಸಾಂಸ್ಕೃತಿಕ ವೈಭವ ಕನ್ನಡ ಸಾಹಿತ್ಯ ಮತ್ತು ಇಂದಿನ ಯುವಕರ ಜವಾಬ್ದಾರಿಯನ್ನು ವಿಶ್ಲೇಷಿಸಿದರು.ಸುಳ್ಯ ತಾಲೂಕು ಆಸ್ಪತ್ರೆಯ ಸ್ತ್ರೀ ರೋಗ ತಜ್ಞರು ಮತ್ತು ಸಾಹಿತಿಗಳಾದ ಡಾ ಶಾಲಿನಿ ವಿ.ಎಲ್,ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಪ್ರಕಾಶ್ ರಾವ್,ಡಾ ಗೀತಾ ದೊಪ್ಪ, ಡಾ. ವೀಣಾ ಎನ್, ಡಾ ನವ್ಯ, ಡಾ ಅಂಜಲಿ, ಡಾ ಅಪೂರ್ವ ದೊರೆ, ಡಾ ರವಿಶಂಕರ್, ಕೆವಿಜಿ ಸಹ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ ಪ್ರಮೋದ್ ಕೆ.ಜೆ, ಡಾ ಮನೀಶ್,ಚಂದ್ರಾವತಿ ಕೆ. ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಒ.ಬಿ.ಜಿ ವಿಭಾಗದ ಪ್ರಾಧ್ಯಪಕರಾದ ಡಾ ವೀಣಾ ಎನ್ ಸ್ವಾಗತಿಸಿದರು. ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಡಾ ನವ್ಯ ಹಾಗೂ ಸಹ ಪ್ರಾಧ್ಯಪಕರು ಡಾ ಅಂಜಲಿ ಅತಿಥಿಗಳ ಪರಿಚಯ ವಾಚಿಸಿದರು. ತ್ರಿತೀಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಾದ ಖುಷಿ ಐ ಪಟೇಲ್ ಹಾಗೂ ಕೃಷ್ಣಲಾಲ್ ಜಿ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈವಿಧ್ಯ ನೆರವೇರಿತು.





