ಸುಳ್ಯ:ಎಲ್ಲಾ ಶಿಕ್ಷಣವು ಎಲ್ಲಾ ವರ್ಗದವರಿಗೂ ಲಭಿಸಬೇಕೆಂಬುದು ಸುಳ್ಯದ ಅಮರ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡ ಅವರ ಕನಸು. ಈ ಪ್ರದೇಶದಲ್ಲಿ ಕಿಂಡರ್ ಗಾರ್ಟನ್ ನಿಂದ ವೈದ್ಯಕೀಯ ಶಿಕ್ಷಣದವರೆಗಿನ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟ್ರಮಣ ಗೌಡರು 8-8-1990 ರಲ್ಲಿ ಕಾನೂನು ಮಹಾವಿದ್ಯಾಲಯವನ್ನು ಸ್ಥಾಪಿಸಿ ಈಗ ಅವರ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಮುನ್ನಡೆಸುತ್ತಿದ್ದಾರೆ. ಇಂದಿಗೆ ಈ ಕಾಲೇಜು
34 ವರ್ಷಗಳನ್ನು ಪೂರೈಸಿ 35ನೇ ವರ್ಷಕ್ಕೆ ಪಾದಾರ್ಪಣೆಗೈದಿರುತ್ತದೆ.
ಕೆ.ವಿ.ಜಿ. ಕಾನೂನು ಕಾಲೇಜಿಗೆ 1990ರಲ್ಲಿ ಭಾರತೀಯ ವಕೀಲರ ಸಂಘದಿಂದ (ಬಾರ್ ಕೌನ್ಸಿಲ್ ಆಫ್ ಇಂಡಿಯ) ಮಾನ್ಯತೆ ದೊರೆತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಶಾಶ್ವತ ಸಂಯೋಜನೆಯನ್ನು ಹೊಂದಿರುತ್ತದೆ. 5 ವರ್ಷದ ಬಿ.ಎ, ಎಲ್.ಎಲ್.ಬಿ ಕಾನೂನು ಪದವಿ ಮತ್ತು 3 ವರ್ಷದ ಕಾನೂನು ಪದವಿ ತರಗತಿಗಳು ನಡೆಯುತ್ತಿವೆ. ಕೆ.ವಿ.ಜಿ ಕಾನೂನು ಮಹಾವಿದ್ಯಾಲಯವು ಕಾನೂನು ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯವನ್ನು ಹೊಂದಿರುತ್ತದೆ. ನೂತನವಾಗಿ ನಿರ್ಮಿಸಿದ ಬೃಹತ್ ಸ್ವಂತ ಕಟ್ಟಡವನ್ನು
ಡಾ. ಕುರುಂಜಿ ವೆಂಕಟ್ರಮಣ ಗೌಡ
ಹೊಂದಿದ್ದು, ಸುಸಜ್ಜಿತ ಗ್ರಂಥಾಲಯ, ಇ-ಗ್ರಂಥಾಲಯ, ವಿಶಾಲ ಸಭಾಂಗಣ ಮತ್ತು ಅಣಕು ನ್ಯಾಯಾಲಯ ಕೊಠಡಿಯನ್ನು ಹೊಂದಿರುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೋಸ್ಕರ ದ್ರೃಕ್-ಶ್ರವಣ ತಂತ್ರಜ್ಞಾನದ ಕೊಠಡಿಯನ್ನು ಒದಗಿಸಲಾಗಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಉತ್ತಮ ಫಲಿತಾಂಶವನ್ನು ಪಡೆಯುತ್ತಾ ಬಂದಿರುವುದು ಈ ಸಂಸ್ಥೆ ಯ ಹೆಗ್ಗಳಿಕೆ. ಅಲ್ಲದೇ ಈ ಕಾನೂನು ವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಹಲವಾರು
ಡಾ. ಕೆ.ವಿ. ಚಿದಾನಂದ
ವಿದ್ಯಾರ್ಥಿಗಳು ನ್ಯಾಯಾಧೀಶರಾಗಿ, ಸಂಶೋಧಕರಾಗಿ, ನ್ಯಾಯವಾದಿಗಳಾಗಿ, ಆಡಳಿತ ಸೇವಾ ವಿಭಾಗದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಾಗೂ ಇನ್ನಿತರ ಉನ್ನತ ಹುದ್ದೆಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಾದ ರಾಷ್ಟ್ರೀಯ ಸೇವಾಯೋಜನೆ ಘಟಕ, ಅಂತರ ಕಾಲೇಜು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಕ್ಷೇತ್ರ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸಾಧನೆಗೈಯುತ್ತಿದ್ದಾರೆ.
ಕಾನೂನು ಪದವೀಧರರಿಗೆ, ನ್ಯಾಯವಾದಿಗಳಾಗಿ ಮಾತ್ರವಲ್ಲದೇ ನ್ಯಾಯಾಧೀಶರಾಗಿ, ಕಾನೂನು ಉಪನ್ಯಾಸಕರಾಗಿ, ಕಾನೂನು ಸಲಹೆಗಾರರಾಗಿ, ಕಂಪೆನಿಯ ಆಡಳಿತಾತ್ಮಕ ಹುದ್ದೆಗಳಲ್ಲಿ ಸರಕಾರಿ ಉನ್ನತ ಹುದ್ದೆಗಳಲ್ಲಿ ರಕ್ಷಣಾ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾನೂನು ಶಿಕ್ಷಣ, ಕಾನೂನು ಅರಿವು ಪಡೆಯುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಕಾನೂನು ತಜ್ಞರುಗಳ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಾನೂನಿನ ಮಹತ್ವವನ್ನು ತಿಳಿಸುವ ಜವಾಬ್ದಾರಿಯುತ ಕಾರ್ಯ ಮಾಡುತ್ತಿದೆ. ಅಲ್ಲದೆ ಸಾಮಾಜಿಕ ಜವಾಬ್ದಾರಿ ಮೂಡಿಸುವ ನಿಟ್ಟಿನಲ್ಲಿ ಕ್ಷೇತ್ರ ಸಮೀಕ್ಷೆ, ಆರೋಗ್ಯ ಜಾಥಾ, ಸ್ವಚ್ಚತಾ ಕಾರ್ಯಕ್ರಮ ಮುಂತಾದುವುಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತದೆ.