ಸುಳ್ಯ:ರಾಜ್ಯದ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಒಂದಾದ ಕೆವಿಜಿ ಕಾನೂನು ಕಾಲೇಜಿನಲ್ಲಿ 2024-2025ನೇ ಅಧ್ಯಯನ ವರ್ಷದಲ್ಲಿ ಪ್ರವೇಶಾತಿ ಆರಂಭಗೊಂಡಿದೆ. B.A.,LL.B (5 Years Course) ಮತ್ತು LL.B (3Years course)ಗೆ ಪ್ರವೇಶ ಆರಂಭಗೊಂಡಿದೆ. 5 ವರ್ಷದ
B.A.,LL.B ಕೋರ್ಸ್ಗೆ ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎಸ್ಸಿ/ಎಸ್ಟಿ ವಿಭಾಗದವರಿಗೆ
ಶೇ.40 ಅಂಕಗಳು ಪಡೆದಿರಬೇಕು.3 ವರ್ಷದ LL.B ಕೋರ್ಸ್ಗೆ ಶೇ.45 ಅಂಕಗಳೊಂದಿಗೆ ಯಾವುದೇ ಪದವಿ ಉತ್ತೀರ್ಣರಾಹಬೇಕು.ಎಸ್ಸಿ/ಎಸ್ಟಿ ವಿಭಾಗದವರಿಗೆ ಶೇ.40 ಅಂಕಗಳು ಪಡೆದಿರಬೇಕು. ಹುಡುಗ ಮತ್ತು ಹುಡುಗಿಯರಿಗೆ ಹಾಸ್ಟೇಲ್ ವ್ಯವಸ್ಥೆ ಲಭ್ಯವಿದೆ. ಕನ್ನಡ ಮತ್ತು ಇಂಗ್ಲೀಷ್ ಮೀಡಿಯಂನಲ್ಲಿ ಅಧ್ಯಯನಕ್ಕೆ ಅವಕಾಶ ಇದೆ.ಅತ್ಯುತ್ತಮ ಕಾಲೇಜು ಕ್ಯಾಂಪಸ್, ಕಟ್ಟಡ,ಸುಸ್ಸಜ್ಜಿತ ತರಗತಿ ಕೊಠಡಿಗಳು, ಅತ್ಯುನ್ನತ ಮಟ್ಟದ ಲೈಬ್ರೆರಿಯನ್ನು ಕಾಲೇಜು ಹೊಂದಿದೆ. ಅನುಭವಿ ಮತ್ತು ನುರಿತ ಶಿಕ್ಷಕ ವರ್ಗ ಕಾಲೇಜಿನ ವಿಶೇಷತೆ.
ಬೇರೆ ಜಿಲ್ಲೆ ಮತ್ತು ತಾಲೋಕುಗಳಿಗೆ ಹೋಲಿಸಿದರೆ ಅತೀ ಕಡಿಮೆ ವೆಚ್ಚದಲ್ಲಿ ಪ್ರಶಾಂತವಾದ ಮತ್ತು ಸುಂದರ ಪ್ರಾಕೃತಿಕ ಪರಿಸರದಲ್ಲಿ ಕಾನೂನು ಶಿಕ್ಷಣ ಪಡೆಯಬಹುದು. ಇಲ್ಲಿ ಅಧ್ಯಯನ ನಡೆಸಿದ ಹಲವಾರು ಮಂದಿ ನ್ಯಾಯವಾದಿಗಳಾಗಿ, ನ್ಯಾಯಾಧೀಶರಾಗಿದ್ದಾರೆ.
ಆಧುನಿಕ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಕೆವಿಜಿ ಕಾನೂನು ಕಾಲೇಜನ್ನು ಈಗ ಅವರ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಈ ಎರಡೂ ಭಾಷೆಯಲ್ಲೂ ಇಲ್ಲಿ ಕಾನೂನು ಕಲಿಯಲು ಅವಕಾಶವಿದೆ. ಪಿಯುಸಿ, ಮತ್ತು ಪಧವಿ ವಿದ್ಯಾರ್ಹತೆಯ ಯುವಕ ಯುವತಿಯರೂ ಕೂಡಲೇ ನೋಂದಾಯಿಸಿಕೊಳ್ಳಬಹುದು, ಇಲ್ಲಿ ಕಲಿಯಲು ಬರುವ ದೂರದ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ಹಾಸ್ಟೆಲ್ ಸೌಲಭ್ಯವಿದೆ. ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲ್ಞಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ .
ಹೆಚ್ಚಿನ ವಿವರಗಳಿಗೆ: 08257- 230603 / 7353756813 ಅಥವಾ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.