ಸುಳ್ಯ:ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ “ಕಲಾಕಾರ್ 2024 ಮೇ 31ರಂದು ಅಮರಶ್ರೀ ಭಾಗ್ನ ಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ತಿಪ್ಪೇಸ್ವಾಮಿ ಜಿ., ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ, ಬಿ.ಎಂ.ಎಸ್. ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೆಜ್ಮೇಂಟ್ ಬೆಂಗಳೂರು ಅವರು ಭಾಗವಹಿಸಿ ಮಾತನಾಡಿ
ಅವರು ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆ, ಆಟೋಟ ಸ್ಪರ್ಧೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮತ್ತು ಕೌಶಲ್ಯ ಎಂಬಿತ್ಯಾದಿ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದರು.
ವಿ.ಟಿ.ಯು. ಬೆಳಗಾವಿ ಇದರ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು ಅದು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಈ ವರ್ಷದ ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಪಿ.ಹೆಚ್.ಡಿ. ಪದವಿ ಪಡೆದ ಡಾ. ಕಿಶೋರ್ ಕುಮಾರ್ ಬಿ.ಆರ್ ಮತ್ತು ಡಾ. ಸಲೀಂ ಮಲಿಕ್ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಇದರ ಜೊತೆಗೆ ಎಂ.ಟೆಕ್: ಡಿಜಿಟಲ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ 2ನೇ ರ್ಯಾಂಕ್ ಪಡೆದ ಸಹನ ಎಸ್.ಎಂ., ಎಂ.ಟೆಕ್: ಕನ್ಸ್ಟçಕ್ಷನ್ ಟೆಕ್ನಾಲಜಿ – ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 2ನೇ ರ್ಯಾಂಕ್ ಪಡೆದ ನಿಸರ್ಗ ವೈ.ಕೆ., ಎಂ.ಟೆಕ್: ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ೪ನೇ ರ್ಯಾಂಕ್ ಪಡೆದ ಆಶಿಕ ಕೆ.ಸಿ., ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದ ಅಬ್ದುಲ್ ಮುನ್ನಾವರಲಿ ಹಾಗೂ ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ತಿಶನ್ ಎ.ಎಂ. ಅವರನ್ನು ಸನ್ಮಾನಿಸಲಾಯಿತು.
ವಿ.ಟಿ.ಯು. ಬೆಳಗಾವಿ ಇದರ ಕಾರ್ಯಕಾರಿ ಮಂಡಳಿ ಹಾಗೂ ವಿವಿಧ ಸಮಿತಿಗಳಿಗೆ ನೇಮಕಗೊಂಡು ಪ್ರಸಕ್ತ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ಉಪನ್ಯಾಸಕರಾದ ಡಾ. ಶ್ರೀಧರ್ ಕೆ., ಉಪಪ್ರಾಂಶುಪಾಲ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರು, ಡೀನ್ ಸ್ಟುಡೆಂಟ್ ಅಫೇರ್ಸ್, ಡಾ. ಪ್ರವೀಣ ಎಸ್.ಡಿ., ಫಿಸಿಕ್ಸ್ ವಿಭಾಗ ಮುಖ್ಯಸ್ಥರು, ಡೀನ್ ಎಕ್ಸಾಮಿನೇಶನ್, ಡಾ. ಸವಿತಾ ಸಿ.ಕೆ., ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ/ಡೀನ್ ರೀಸರ್ಚ್, ಡಾ. ಭಾಗ್ಯಜ್ಯೋತಿ ಕೆ.ಎಲ್., ಅಸೋಸಿಯೇಟ್ ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಡಾ. ಸುರೇಶ ವಿ, ಪ್ರಾಂಶುಪಾಲ ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. 2024ನೇ ಸಾಲಿನ ಪದವಿ ಪೂರ್ಣಗೊಳಿಸಿದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪ್ರಶಸ್ತಿಯನ್ನು ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಶಸ್ತಿಯನ್ನು ವಿತರಿಸಲಾಯಿತು ಹಾಗೂ ರಾಷ್ಟ್ರ ಮಟ್ಟದ ಚಾಂಪಿಯನ್ಶಿಪ್ ಪಡೆದ ಗೋ-ಕಾರ್ಟ್ ಡಿಸೈನ್ ಚಾಲೆಂಜ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ತಂಡಕ್ಕೆ ಅಭಿನಂದಿಸಲಾಯಿತು. ಪ್ರಾರ್ಥನೆಯನ್ನು ತ್ರಿಶಾಲಿ ಮತ್ತು ತಂಡ ನಡೆಸಿಕೊಟ್ಟರು, ಆದಿತ್ಯ ಸ್ವಾಗತಿಸಿ, ಅಭಿಶೇಕ್ ಆರ್. ಆರ್. ವಂದಿಸಿದರು. ಈ ಕಾರ್ಯಕ್ರಮವನ್ನು ಲಿಪ್ತಿ, ಸ್ನೇಹ, ಪ್ರಿನ್ಸ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.