ಸುಳ್ಯ: ಬೇಸಿಗೆಯ ಬಿಸಿಲ ಬೇಗೆಗೆ ತಂಪೆರೆಯಲು, ಮಕ್ಕಳ ಬೇಸಿಗೆ ರಜಾದ ಸಂಭ್ರಮವನ್ನು ಇಮ್ಮಡಿಗೊಳಿಸಲು ಬರುತಿದೆ ‘ಕೆವಿಜಿ ಐಪಿಎಸ್ ಸಮ್ಮರ್ ಸ್ವಿಮ್ಮಿಂಗ್ ಕ್ಯಾಂಪ್’..
ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ನಡೆಯುವ ಈಜು ಶಿಬಿರ ಎ.15 ರಿಂದ 25 ರ ತನಕ ನಡೆಯಲಿದೆ. ಬೇಸಿಗೆ ರಜೆ ಆರಂಭಗೊಂಡ ಕೂಡಲೇ ಅಲ್ಲಲ್ಲಿ ವಿವಿಧ ಶಿಬಿರಗಳು ನಡೆಯುತ್ತದೆ. ಹತ್ತು ಹಲವು ಕ್ಯಾಂಪ್ಗಳ ಮಧ್ಯೆ ಈ
ಸ್ವಿಮ್ಮಿಂಗ್ ಕ್ಯಾಂಪ್ ಭಿನ್ನ ಮತ್ತು ಅಪರೂಪ. 5 ವರ್ಷದಿಂದ 15 ವರ್ಷ ವಯಸ್ಸಿನ ಮಕ್ಕಳಿಗಾಗಿ 10 ದಿನಗಳ ಈಜು ಶಿಬಿರ ಏರ್ಪಡಿಸಲಾಗಿದ್ದು ಬೆಳಿಗ್ಗೆ 9.30 ರಿಂದ 10.30ರ ತನಕ ಶಿಬಿರ ನಡೆಯಲಿದೆ. ಶಿಬಿರಕ್ಕೆ ದಾಖಲಾತಿ ಆರಂಭಗೊಂಡಿದೆ.
ಈಜು ಎಂಬುದು ಜೀವನದ ಒಂದು ಕಲೆ. ಈಜು ಹಲವಾರು ಸಂದರ್ಭದಲ್ಲಿ ಬದುಕಿನ ಅನಿವಾರ್ಯತೆಯೂ ಹೌದು. ಬದುಕಿನ ರಕ್ಷಣಾ ಕೌಶಲ್ಯಗಳಲ್ಲಿ ಒಂದಾದ ಈಜು ನಮ್ಮ ಆರೋಗ್ಯ ಸಂರಕ್ಷಣೆಯ ಉತ್ತಮ ವ್ಯಾಯಾಮ. ಫಿಟ್ನೆಸ್ಗೆ ಹೇಳಿ ಮಾಡಿಸಿದ ಕಲೆಯಾದ ಈಜು ಒಂದು ಕ್ರೀಡೆಯೂ ಹೌದು.ಒಲಿಂಪಿಕ್ಸ್ ಸೇರಿದಂತೆ ರಾಷ್ಟ್ರ, ಅಂತಾರಾಜ್ಯ ಮಟ್ಟದಲ್ಲಿ ಪ್ರಸಿದ್ಧವಾದ ಸ್ವಿಮ್ಮಿಂಗ್ನ ಕುರಿತು ಮಕ್ಕಳಲ್ಲಿ ಆಸಕ್ತಿ ಬೆಳೆಸುವುದರಿಂದ ಈ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳನ್ನು ಹೊರ ತರಲು ಸಾಧ್ಯವಾಗುತ್ತದೆ. ಎಳೆವೆಯಲ್ಲಿಯೇ ಈಜು ಕಲಿತರೆ ಮಗುವಿಗೊಂದು ಕಲೆ ಮತ್ತು ಕ್ರೀಡೆ ಕಲಿಸಿದಂತೆ. ಆದುದರಿಂದ ಮಕ್ಕಳಲ್ಲಿ ಎಳವೆಯಲ್ಲಿಯೇ ಈಜಿನ ಬಗ್ಗೆ ಆಸಕ್ತಿ ಬೆಳೆಯಲು ಕೆವಿಜಿ ಐಪಿಎಸ್ ವತಿಯಿಂದ ಪ್ರತಿ ವರ್ಷ ಸಮ್ಮರ್ ಸ್ವಿಮ್ಮಿಂಗ್ ಕ್ಯಾಂಪ್ಗಳನ್ನು ಆಯೋಜಿಸಲಾಗುತ್ತದೆ.
ಸ್ವಿಮ್ಮಿಂಗ್ ಕ್ಯಾಂಪ್ಗೆ ದಾಖಲಾತಿ ಆರಂಭಗೊಂಡಿದ್ದು
ಸೀಮಿತ ಸಂಖ್ಯೆಯ ಮಕ್ಕಳಿಗೆ ಅವಕಾಶ ಇದೆ. ಮೊದಲು ದಾಖಲಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ದಾಖಲಾತಿ ಮತ್ತಿತರ ವಿವರಗಳ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ:
08257-235157,235156
9483640707
9900701281