ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 2025-26ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕ್ಯಾಂಡಲ್ಗಳನ್ನು ಹಂಚಿ, ಶಾಲಾ ನಿರ್ದೇಶಕಿ ಡಾ.ಜ್ಯೋತಿ ಆರ್ ಪ್ರಸಾದ್ ಅವರು ದೀಪ ಹಚ್ಚಿ ವಿದ್ಯಾರ್ಥಿಗಳಿಗೆ
ಶುಭ ಹಾರೈಸಿದರು.ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿ ಲಕ್ಷ್ಮಿ ಲಾವಣ್ಯ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕಿ ಕೀರ್ತನ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ , ಎ ಒ ಎಲ್ ಇ ಕಮಿಟಿ’ ಬಿ’ ಇದರ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅಡ್ತಲೆ, ಪ್ರಸನ್ನ ಕಲ್ಲಾಜೆ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









