ಸುಳ್ಯ: ಕೆ.ವಿ.ಜಿ.ಇಂಟರ್ ನ್ಯಾ಼ಷನಲ್ ಪಬ್ಲಿಕ್ ಸ್ಕೂಲ್ನ ಸಿ.ಬಿ.ಎಸ್.ಸಿ ಪಠ್ಯಕ್ರಮದ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ.ರವಿಶಂಕರ ಮತ್ತು ಅನುಪಮ ದಂಪತಿಗಳ ಪುತ್ರಿ ಅಭಿಜ್ಞಾ.ಎಸ್ ಭಟ್(೯೫.೮%) ಮತ್ತು ದ್ವಿತೀಯ ಸ್ಥಾನ ಪಡೆದ ಶುಭಕರ ಬೊಳುಗಲ್ಲು ಮತ್ತು ಗೀತಾಂಜಲಿ ದಂಪತಿಗಳ ಪುತ್ರಿ ಸೃಜಾನಾ ಬಿ.ಎಸ್(೯೧.೭) ಇವರನ್ನು ಕೆ.ವಿ.ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ
ಸಂಚಾಲಕರಾದ ಡಾ.ರೇಣುಕಾ ಪ್ರಸಾದ್ ಕೆ ವಿ ಯವರು ಅವರ ಆಡಳಿತ ಕಛೇರಿಯಲ್ಲಿ ಅಭಿನಂದಿಸಿ ವಿದ್ಯಾರ್ಥಿಗಳಿಗೆ ತಲಾ ರೂ.10,000 ಪ್ರೋತ್ಸಾಹ ಧನ ನೀಡಿ ಗೌರವಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೆವಿ.ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಪ್ರಾಂಶುಪಾಲರಾದ ಅರುಣ್ ಕುಮಾರ್ ಎ.ಓ.ಎಲ್.ಇ ಕಛೇರಿಯ ಆಡಳಿತ ಅಧಿಕಾರಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯು ಸತತ ಹತ್ತನೇ ಬಾರಿ ಶೇಕಡ 100 ಫಲಿತಾಂಶ ದಾಖಲಿಸಲು ಕಾರಣರಾದ ಶಾಲೆಯ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂಧಿಗಳನ್ನು ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು ಅಭಿನಂದಿಸಿದರು.