ಸುಳ್ಯ:ಕೆವಿಜಿ ಸಮೂಹ ಸಂಸ್ಥೆಗಳಾದ ಕೆ ವಿ ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಅಮರ ಜ್ಯೋತಿ ಪಿಯು ಕಾಲೇಜು, ಕೆವಿಜಿ ಐಟಿಐ ಇವುಗಳ ಸಹಯೋಗದೊಂದಿಗೆ 75ನೇ ವರ್ಷದ ಗಣರಾಜ್ಯೋತ್ಸವವನ್ನು ಅರಿಸಲಾಯಿತು. ಕೆ ವಿ ಜಿ ಶಿಕ್ಷಣ ಸಂಸ್ಥೆಯ ಬಿ ಕಮಿಟಿ ಯ ಸಿ ಇ ಓ ಉಜ್ವಲ್ ಊರಬೈಲು ಧ್ವಜರೋಹಣ ನೆರವೇರಿಸಿ ಭಾರತ ಸಂವಿಧಾನದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳ ಬಗ್ಗೆ

ಮಕ್ಕಳಿಗೆ ಅರಿವು ಮೂಡಿಸಿದರು. ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಸಹ ಮುಖ್ಯೋಪಾಧ್ಯಾಯರು ಶಾಲಾ ಶಿಕ್ಷಕ ವರ್ಗದವರು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಂಟನೇ ತರಗತಿಯ ವಿದ್ಯಾರ್ಥಿನಿ ಮನ್ವಿತಳ ಕಾರ್ಯಕ್ರಮ ನಿರೂಪಣೆಯ ಜೊತೆ ಅಮರಜ್ಯೋತಿ ಪಿ. ಯು. ಕಾಲೇಜು ಹಾಗೂ ಕೆವಿಜಿ ಐಪಿಎಸ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನೆಡೆಯಿತು .
ಶಾಲಾ ಸಂಚಾಲಕರಾದ ಡಾ. ರೇಣುಕಾಪ್ರಸಾದ್ ಕೆ. ವಿ. ಹಾಗೂ ಡಾ. ಜ್ಯೋತಿ ಆರ್. ಪ್ರಸಾದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಂಟನೇ ತರಗತಿಯ ವಿದ್ಯಾರ್ಥಿ ಶ್ರದ್ಧಾ ಪೈಯ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.









