ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಮತ್ತು ಮಕ್ಕಳ ದಿನಾಚರಣೆ ಆಚರಿಸಲಾಯಿತು ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಮತ್ತು ಎಲ್ಲಾ
ಕನ್ನಡ ಶಿಕ್ಷಕಿಯರು ದೀಪ ಪ್ರಜ್ವಲನೆಯ ಮೂಲಕ ಶುಭಾರಂಭ ಮಾಡಿದರು.ಕಾರ್ಯಕ್ರಮದಲ್ಲಿ ಕೆವಿಜಿ ಅಮರ ಜ್ಯೋತಿ ಪಿ ಯು ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ರೀತಿ ಕನ್ನಡದ ಮಹತ್ವ, ಸಂಸ್ಕೃತಿ ಹಾಗೂ ಭಾಷಾ ಪರಂಪರೆಯ ಕುರಿತು ಮಾತನಾಡಿದರು. ಹತ್ತನೇ ತರಗತಿಯ ಮನ್ವಿತ ಸಿ ಎಚ್ ಮತ್ತು ಸೋನಾ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ಶಮ್ಯಾ ವಂದಿಸಿದರು. ಕಾರ್ಯಕ್ರಮದ ವಿಶೇಷತೆಯನ್ನು 10ನೇ ತರಗತಿಯ ದೀಕ್ಷಿತ್ ಮತ್ತು 5ನೇ ತರಗತಿಯ ಆದ್ಯರವರು ವಿವರಿಸಿದರು. ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕಿಯರಾದ ಶೋಭಾರಾಜ್ ಕಲ್ಲಾಜೆ ಮತ್ತು ಸೌಮ್ಯ ಕೆ ನಿರೂಪಿಸಿ ಸುನಿತಾ ವಂದಿಸಿದರು ದಿನದ ವಿಶೇಷತೆಯ ಕುರಿತು ಧನ್ಯ ತಿಳಿಸಿದರು.











