ಸುಳ್ಯ:ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕೆ. ವಿ.ಜಿ ಐಪಿಎಸ್ ಶೇಕಡ 100 ಫಲಿತಾಂಶ ದಾಖಲಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇದರ ವತಿಯಿಂದ ನಡೆಸಲ್ಪಡುವ 2023- 24 ನೇ ಸಾಲಿನ
ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕೆವಿಜಿ ಐಪಿಎಸ್ ನ 12 ವಿದ್ಯಾರ್ಥಿಗಳು ಭಾಗವಹಿಸಿದ್ದು ಶೇಕಡಾ 100 ಫಲಿತಾಂಶ ಲಭಿಸಿರುತ್ತದೆ. ಲೋವರ್ ಗ್ರೇಡ್ ನಲ್ಲಿ 9 ವಿದ್ಯಾರ್ಥಿಗಳು ಹಾಜರಾಗಿದ್ದು 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಒಂದು ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿರುತ್ತಾರೆ. ಹೈಯರ್ ಗ್ರೇಡ್ ಇದರಲ್ಲಿ 3 ವಿದ್ಯಾರ್ಥಿಗಳು ಹಾಜರಾಗಿದ್ದು ಒಬ್ಬ ವಿದ್ಯಾರ್ಥಿ ಉನ್ನತ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉರ್ಣರಾಗಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಸಿ ಇ ಒ, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ವೃಂದದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿರುತ್ತಾರೆ.