ಸುಳ್ಯ: ಸಿಬಿಎಸ್ಸಿ ಶಾಲೆಗಳ ಒಕ್ಕೂಟ ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಮಡಿಕೇರಿ ಇದರ ಸಹಯೋಗದಲ್ಲಿ ಜ್ಞಾನ ನಗಂಗಾ ವಸತಿ ಶಾಲೆ ಕುಶಾಲನಗರ ಇಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಶಾಲಾ ಸಿ ಬಿ ಎಸ್ ಸಿ ಶಾಲೆಗಳ ವಿದ್ಯಾರ್ಥಿಗಳಿಗೆ ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು
ಬಹುಮಾನಗಳನ್ನು ಪಡೆದಿರುತ್ತಾರೆ. 7ನೇ ತರಗತಿ ಅನುಜ್ಞಾ ಭಟ್, ಪ್ರಥಮ ಮತ್ತು ಪ್ರತೀಕ್ಷ ತೃತೀಯ ಸ್ಥಾನ ಹಾಗೂ 8ನೇ ತರಗತಿ ಕೃತಾರ್ಥ್ ಪಿ. ಡಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ. ವಿ. ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಜ್ವಲ್ ಯು. ಜೆ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಮೇಲ್ವಿನ್ ಹಾಗೂ ಸುಜಿತ್ ಇವರುಗಳು ಮಾರ್ಗದರ್ಶನ ನೀಡಿರುತ್ತಾರೆ