ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಸಮಾಜ ಸೇವಾ ಕಾರ್ಯಕ್ರಮದಡಿಯಲ್ಲಿ ನೀಡುವ ರೂ. 1 ಲಕ್ಷ ಸಹಾಯಧನದಲ್ಲಿ ಪ್ರಕೃತಿ ವಿಕೋಪದಲ್ಲಿ ಹನಿಗೀಡಾದ ಜಯನಗರ ಚೆಂಡೆಮೂಲೆಯ ಸರೋಜಾ ಇವರ ಪೂರ್ಣಗೊಳಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ
ನಡೆಯುತ್ತಿರುವ ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆಯ ಎರಡನೇ ದಿನವಾದ 26 ರಂದು ಮನೆಯನ್ನು ಹಸ್ತಾಂತರ ಮಾಡಲಾಯಿತು. ಮನೆಯ ಹಸ್ತಾಂತರವನ್ನು ದೀಪ ಬೆಳಗಿಸುವ ಮೂಲಕ ಪದ್ಮಶ್ರೀ ಪುರಸ್ಕ್ರತ ಡಾ. ಗಿರಿಶ್ ಭಾರದ್ವಾಜ್ ಇವರು ನೇರವೆರಿಸಿದರು.

ಮುಖ್ಯ ಅತಿಥಿಯಾಗಿ ನ.ಪಂ.ಮುಖ್ಯಾಧಿಕಾರಿ ಸುಧಾಕರ್ .ಎಂ.ಎಚ್, ನ.ಪಂ.ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ ಭಾಗವಹಿಸಿದ್ದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ದಿನೇಶ್ ಅಂಬೆಕಲ್,ಕೊಶಾಧಿಕಾರಿ ಜನಾರ್ದನ್ ನಾಯ್ಕ್ ಸದಸ್ಯರಾದ ಅನಂದ ಖಂಡಿಗ, ಸಿ.ಎಚ್.ಪ್ರಭಾಕರನ್ ನಾಯರ್, ಗಂಗಾಧರ ಮಟ್ಟಿ ಉಪಸ್ಥಿತರಿದ್ದರು. ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿ, ಹರಿಶ್ ಬಂಟ್ವಾಳ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದಿನೇಶ್ ಅಂಬೆಕಲ್ ವಂದಿಸಿದರು.











