ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ಹಾಗೂ ಎಂ.ಟೆಕ್. ಸ್ನಾತಕೋತ್ತರ ಪದವಿಯ ಮೊದಲನೆಯ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಕೆ.ವಿ.ಜಿ.ಸಿ.ಇ. ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.ಕಮಿಲ ಕೆಮಿಕಲ್ ಸಂಸ್ಥೆಯ ಮಾಲಕರಾದ ಕೆ.ವಿ. ಸುರೇಶ್ಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಾವುದೇ ಉದ್ಯಮ ಅಥವಾ ಕೈಗಾರಿಕೆ ನಡೆಸಲು ನಿರ್ದಿಷ್ಟವಾದ ಗುರಿ ಮತ್ತು

ಕಾರ್ಯಯೋಜನೆಯ ಧೈರ್ಯದ ಅಗತ್ಯತೆ ಇದೆ ಎಂದು ಹೇಳಿದರು. ಅತಿಥಿಯಾಗಿದ್ದ ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು ಹಾಗು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ ಮಾತನಾಡಿ ಪದವಿ ಪಡೆದ ನಂತರ ಜವಾಬ್ದಾರಿಯುತರಾಗಿ, ಧೈರ್ಯ, ಸ್ವಪ್ರಯತ್ನ ಮತ್ತು ಸಮರ್ಪಕ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಲ್ಲಿ ಯಾವುದೇ ಉದ್ಯಮ ಅಥವಾ ಉದ್ಯೋಗದಲ್ಲಿ ತೊಡಗಿಸಿಕೊಂಡು ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ವಹಿಸಿದ್ದರು. ಎಂ.ಬಿ.ಎ. ವಿದ್ಯಾರ್ಥಿನಿಯರಾದ ಅನುಷಲಕ್ಷ್ಮಿ ಮತ್ತು ದೀಕ್ಷ ಎಸ್. ಪ್ರಾರ್ಥನೆ ಹಾಡಿದರು. ಎಂಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಇಮ್ಯಾಕ್ಯುಲೇಟ್ ಮೇರಿ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಹಾಗೂ ಸಭಾ ಸದರನ್ನು ಡಾ. ಭಾಗ್ಯ ಹೆಚ್.ಕೆ. ಸ್ವಾಗತಿಸಿ ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಎ. ಧನ್ಯವಾದ ಸಮರ್ಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಅರುಣ ಪಿ.ಜಿ ಹಾಗೂ ಅಶ್ವಿಜ ಕೆ.ಸಿ ಇವರು ಕಾರ್ಯಕ್ರಮ ನಿರೂಪಿಸಿದರು.